ಶಿವಗಿರಿ ಸೊಸೈಟಿಯ ಬಲಿಷ್ಠಗೊಳಿಸಲು ಸಿಬ್ಬಂದಿ ಕೈಜೋಡಿಸಿ: ಸುಜನ್ ಕುಮಾರ್


ಬೆಳಗಾವಿ,11: ಸೊಸೈಟಿಯ ಅಭಿವೃದ್ಧಿಗೆ, ಉನ್ನತ ಮಟ್ಟಕ್ಕೆ ಬೆಳೆಯಲು ಶ್ರಮಿಸಿದ ಸೊಸೈಟಿಯ ನಿದರ್ೇಶಕ ಮಂಡಳಿ ಹಾಗೂ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಸೊಸೈಟಿಯ ಅಧ್ಯಕ್ಷ ಸುಜನ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಕಪಿಲೇಶ್ವರ ಕಾಲನಿಯ ರಿದ್ಧಿ ಸಿದ್ಧಿ ವಿನಾಯಕ ಮಂದಿರದ ಸಭಾಭವನದಲ್ಲಿ ಬುಧವಾರ 11 ರಂದು ಆಯೋಜಿಸಲಾಗಿದ್ದ, ಶಿವಗಿರಿ ಕೋ ಅಪ್ ಕ್ರೆಡಿಟ್ ಸೊಸೈಟಿಯ್ 20 ನೇ ವಾಷರ್ಿಕ ಮಹಾಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಿಬ್ಬಂದಿಗಳ ಸತತ ಪ್ರಯತ್ನದಿಂದ ಶಿವಗಿರಿ ಸೊಸೈಟಿಯು ಹೆಮ್ಮರವಾಗಿ ಬೆಳೆದು ನಿಂತಿದೆ. ಸಂಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಆಡಳಿತ ಮಂಡಳಿ, ಗ್ರಾಹಕರು ಕೈಜೋಡಿಸಬೇಕಿದೆ. ಶಿವಗಿರಿ ಸೊಸೈಟಿಯಿಂದ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಅನುಕೂಲತೆಗಳನ್ನು ಮಾಡುತ್ತಿದೆ, ಸಮಾಜ ಸೇವೆಯಲ್ಲಿ ತನ್ನದೆ ಛಾಪು ಮೂಡಿಸಿದೆ ಎಂದರು.

ಸೊಸೈಟಿಯ ಮುಖ್ಯ ಕಾರ್ಯ ನಿವರ್ಾಹಕ ಸೋಮನಾಥ ಕಡಕೋಳ ಸೊಸೈಟಿಯ ವಾಷರ್ಿಕ ಲೆಕ್ಕಪತ್ರ ವರದಿಯನ್ನು ಸಭೆಯಲ್ಲಿ ಮಂಡಿಸಿದರು.

ಈ ಸಂದರ್ಭದಲ್ಲಿ ಸೊಸೈಟಿಯ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ಸೊಸೈಟಿಯ ಅತ್ಯುತ್ತಮ ಗ್ರಾಹಕರನ್ನು ಸತ್ಕರಿಸಲಾಯಿತು.  ಮತ್ತು ಸೊಸೈಟಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವ ಸಹಾಯ ಗುಂಪುಗಳ ಉತ್ತಮ ಕಾರ್ಯನಿರ್ವಹಣೆ ಮಾಡಿದಂತಹ ಮಹಿಳೆಯರನ್ನು ಸತ್ಕರಿಸಲಾಯಿತು ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸಾಧಕರನ್ನು ಸನ್ಮಾನಿಸಲಾಯಿತು. 

ಡಾ. ನೇತ್ರಾವತಿ ಸಬ್ನಿಸ್ ಹಾಗು ಸಂಜೀವ ಪೂಜಾರಿ ಸೊಸೈಟಿಯ ಕಾರ್ಯವೈಖರಿ ಯನ್ನು ಶ್ಲಾಘಿಸಿ ಸದಸ್ಯರು ಇದರ ಸದುಪಯೋಗವನ್ನು ಪಡೆಯುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಖೆಯ ಮ್ಯಾನೇಜರ್ ಚಂದ್ರ ಹೆಚ್ ಪೂಜಾರಿ, ಉಪಾಧ್ಯಕ್ಷ ಸುನಿಲ್ ಪೂಜಾರಿ, ನಿದರ್ೇಶಕ ಗಂಗಾಧರ ಎಂ, ಕೃಷ್ಣ ಎಸ್ ಪೂಜಾರಿ, ಜಯಂತ್ ಕೆ ಪೂಜಾರಿ, ಸುಂದರ ಕೋಟಿಯಾನ್, ಮಾಧವ ಕೋಟಿಯಾನ್, ಪದ್ಮಾವತಿ ಪೂಜಾರಿ, ರೇವತಿ ಎಸ್ ಪೂಜಾರಿ, ಸಲಹಾ ಸಮಿತಿ ಸದಸ್ಯರಾದ ಲಕ್ಷ್ಮೀ ಎಸ್ ಪೂಜಾರಿ, ಗಣೇಶ್ ಪೂಜಾರಿ, ಸಂತೋಷ್ ಪೂಜಾರಿ ಸಿಬ್ಬಂದಿವರ್ಗದವರು ಹಾಗೂ  ಉಪಸ್ಥಿತರಿದ್ದರು.