ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಿ
ಬೈಲಹೊಂಗಲ ಪುರಸಭೆಯಲ್ಲಿ ಮಾಜಿ ಸದಸ್ಯರ ಅಭಿನಂದನಾ ಸಮಾರಂಭ ನಡೆಯಿತು. 32 ಸದಸ್ಯರುಗಳನ್ನು ಬುಧವಾರ ಸತ್ಕರಿಸಲಾಯಿತು.
ಬೈಲಹೊಂಗಲ ಪುರಸಭೆಯ ಮಾಜಿ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ತುರಮರಿ ಕರೆ
ಬೈಲಹೊಂಗಲ 12: ಪಟ್ಟಣದ ಜನತೆಗೆ ಮೂಲಭೂತ ಸೌಲಭ್ಯವನ್ನು ಒದಗಿಸುವ ಜೊತೆಗೆ ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಬೇಕೆಂದು ಪುರಸಭೆ ಮಾಜಿ ಸದಸ್ಯ ಮಹಾಂತೇಶ ತುರಮರಿ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಬುಧವಾರ ನಡೆದ ಮಾಜಿ ಸದಸ್ಯರುಗಳ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿ, ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಸದಸ್ಯರುಗಳು ಪಕ್ಷಬೇದ, ಜಾತಿಬೇದ ಮರೆತು ಶ್ರಮಿಸಿದ್ದಾರೆ. ಹಾಲಿ, ಮಾಜಿ ಶಾಸಕರುಗಳು ಸಾಕಷ್ಟು ಅನುದಾನ ಕಲ್ಪಿಸಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದೇ ರೀತಿ ಪುರಸಭೆ ಮುಖ್ಯಾಧಿಕಾರಿಗಳು ಸ್ವಚ್ಛತೆ ಬಗ್ಗೆ ಕಾಳಜಿವಹಿಸಿ ಕೆಲಸ ಮಾಡಿದ್ದಾರೆ.
ನೂತನವಾಗಿ ಆಯ್ಕೆಗೊಂಡ ಪುರಸಭೆ ಸದಸ್ಯರು ಪಟ್ಟಣ ಪ್ರದೇಶವನ್ನು ಧೂಳು ಮುಕ್ತವಾಗಿಸಿ ಸೌಂದರ್ಯ ಹೆಚ್ಚಿಸಬೇಕು. ಪ್ರಮುಖ ಬಜಾರ ರಸ್ತೆಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡಿ ರಸ್ತೆ ಅಗಲಿಕರಣಗೊಳಿಸಿ ಸಂಚಾರ ಕಿರಿಕಿರಿ ತಪ್ಪಿಸಬೇಕು ಎಂದರು.
ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಮಾಜಿ ಅಧ್ಯಕ್ಷರಾದ ರಾಜಶೇಖರ ಮೂಗಿ, ಬಸವರಾಜ ಜನ್ಮಟ್ಟಿ, ಮಾಜಿ ಸದಸ್ಯರಾದ ಬಸವರಾಜ ಕಲಾದಗಿ, ವಿರುಪಾಕ್ಷ ವಾಲಿ, ಮಹೇಶ ಹರಕುಣಿ, ಸಂಜೀವಗೌಡ ಪಾಟೀಲ ಮಾತನಾಡಿದರು.
ಮಾಜಿ ಉಪಾಧ್ಯಕ್ಷ ನಿಸ್ಸಾರಅಹ್ಮದ ತಿಗಡಿ, ಮಾಜಿ ಸದಸ್ಯರಾದ ಮಡಿವಾಳಪ್ಪ ಹೋಟಿ, ಬಾಬು ಹರಕುಣಿ, ಕುಮಾರಗೌಡ ಪಾಟೀಲ, ಬಸವರಾಜ ಬೈಲವಾಡ, ಎ.ಎಂ.ಲೋದಿ, ಶಿವಯೋಗಿ ಹುಲ್ಲೆನ್ನವರ, ದ್ರಾಕ್ಷಾಯಿಣಿ ಮೆಟಗುಡ್ಡ, ಹಾಲಿ ಸದಸ್ಯರಾದ ಬಾಬು ಕುಡಸೋಮಣ್ಣವರ, ಉಳವಪ್ಪ ಬಡ್ಡಿಮನಿ, ಬುಡ್ಡೇಸಾಬ ಶಿರಸಂಗಿ, ಸದ್ದರುದ್ದಿನ ಅತ್ತಾರ, ಕೆ.ಐ.ಮುಲ್ಲಾ, ಉಮಾ ಹೊಸೂರ, ಮಾಜಿ ಸದಸ್ಯೆಯರಾದ ಕಸ್ತೂರೆವ್ವಾ ಉಪ್ಪಿನ, ನಾಜರೀನಬಾನು ಮುಲ್ಲಾ, ರಿಝಿಯಾಬೇಗಂ ಬಾಗೇವಾಡಿ, ಕಮಲವ್ವಾ ಗುಂಡ್ಲೂರ, ಸುಶೀಲಾ ಹೊಂಗಲ, ಸಿಬ್ಬಂದಿ ಸತೀಶ ಖಜ್ಜಿಡೋಣಿ, ರಮೇಶ ಹಿಟ್ಟಣಗಿ, ಸಂಜು ಹಂಚಿನಮನಿ, ಉಮಾ ಬೆಟಗೇರಿ, ಅಶೋಕ ಪಾಗಾದ, ಬಿ.ಎಸ್.ಗುದಗನವರ, ಎಸ್.ಎಸ್. ಮ್ಯಾಗೇರಿ, ಎಸ್.ಎಸ್.ನರಗುಂದ, ಡಿ.ಎಂ. ಖಲೀಪ, ಸುನಾಲಿ ಬುಭನಾಳೆ, ಸಂತೋಷಿ ಪೋಳ, ಎಸ್.ಎನ್.ಗುಂಡ್ಲೂರ, ಲಕ್ಷ್ಮೀ ಮಾದರ, ಸುಧಾ ಕಟಾವಕರ, ಮಲ್ಲೇಶ ಪಟ್ಟಿಹಾಳ, ಸೋಮಲಿಂಗ ದೊಡವಾಡ, ಎ.ಎಂ.ಖೋತವಾಲ ಇದ್ದರು. ರಮೇಶ ಹಿಟ್ಟಣಗಿ ನಿರೂಪಿಸಿ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 