ಲೋಕದರ್ಶನ ವರದಿ
ಕಿತ್ತೂರು (ಬೆಳಗಾವಿ): ಕೇಂದ್ರ ಸಕರ್ಾರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ, ರಾಷ್ಟ್ರೀಯ ಕೌಶಲ ಅಭಿವೃದ್ಧಿ ಕೇಂದ್ರ (ಎನ್ಎಸ್ಡಿಸಿ), ಕದಂಬ ಫೌಂಡೇಷನ್ ಮತ್ತು ನಗರದ ಕೆಎನ್ವಿವಿಎಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಉದ್ಯೋಗ ಮೇಳ ಮತ್ತು ಕೌಶಲ ಮೇಳದಲ್ಲಿ 30 ಅಂಗವಿಕಲ್ರಿಗೆ ಉದ್ಯೋಗ ನೀಡಲಾಯಿತು. ಈ ಪೈಕಿ 10 ಮಂದಿಗೆ ಸ್ಥಳದಲ್ಲೇ ಉದ್ಯೋಗಪತ್ರ ನೀಡಲಾಯಿತು.
48ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 2000ಕ್ಕೂ ಅಧಿಕ ಯುವಕ ಯುವತಿಯರು ಹೆಸರು ನೊಂದಾಯಿಸಿಕೊಂಡಿದ್ದರು. 3500ಕ್ಕೂ ಹೆಚ್ಚು ಉದ್ಯೋಗಾವಕಾಶ ಇದ್ದು, ಸಂಜೆಯವರೆಗೂ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ. 100ಕ್ಕೂ ಹೆಚ್ಚು ಮಂದಿಗೆ ಸ್ಥಳದಲ್ಲೇ ಉದ್ಯೋಗ ನೀಡಲಾಯಿತು.
ಇದೇ ಸಂದರ್ಭದಲ್ಲಿ ನಗರದ ಶಿವಯೋಗಿ ವಿಭೂತಿಮಠ ಸಂಕೀರ್ಣದಲ್ಲಿ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ, ಮೊಬೈಲ್ ಬಿಡಿಭಾಗ ಉತ್ಪಾದನೆ ಹಾಗೂ ಮೊಬೈಲ್ ದುರಸ್ತಿ ಕೌಶಲ ಅಭಿವೃದ್ಧಿಪಡಿಸುವ ತರಬೇತಿ ಕೇಂದ್ರವನ್ನು ಶಾಸಕ ಮಹಾಂತೇಶ ದೊಡ್ಡಗೌಡರ ಉದ್ಘಾಟಿಸಿದರು.
ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡರ, "ಗ್ರಾಮೀಣ ಮಕ್ಕಳಲ್ಲಿ ಪ್ರತಿಭೆ ಇದ್ದರೂ, ಸಂದರ್ಶನ ಎದುರಿಸುವ ಕಲೆ ಅವರಿಗೆ ತಿಳಿದಿರುವುದಿಲ್ಲ. ಮುಂದಿನ ದಿನಗಳಲ್ಲಿ ಎನ್ಎಸ್ಡಿಸಿ ವತಿಯಿಂದ ಗ್ರಾಮೀಣ ಮಕ್ಕಳಿಗಾಗಿ ಸಂದರ್ಶನ ಎದುರಿಸುವ ತರಬೇತಿಯನ್ನೂ ಆಯೋಜಿಸಬೇಕು" ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೌಶಲ ಅಭಿವೃದ್ಧಿ ಖಾತೆ ಸಚಿವ ಅನಂತ್ಕುಮಾರ್ ಹೆಗಡೆಯವರ ದೂರದೃಷ್ಟಿಯ ಫಲವಾಗಿ ಹಳ್ಳಿಹಳ್ಳಿಗಳ ಮಂದಿಗೆ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ನಡೆದಿದೆ. ಗ್ರಾಮೀಣ ಬಡಕುಟುಂಬಕ್ಕೆ ಒಂದು ಉದ್ಯೋಗ ದೊರಕಿದಲ್ಲಿ ಅದು, ರೈತರ ಆತ್ಮಹತ್ಯೆಯಂಥ ಪ್ರಕರಣಗಳನ್ನು ತಡೆಯಲು ದೊಡ್ಡ ಕೊಡುಗೆಯಾಗುತ್ತದೆ. ಅದು ಯಾವ ಸಬ್ಸಿಡಿಗಿಂತಲೂ ದೊಡ್ಡದು ಎಂದು ಅಭಿಪ್ರಾಯಪಟ್ಟರು.
ಕಂಪನಿಗಳು ಕೂಡಾ ಗ್ರಾಮೀಣ ವಿದ್ಯಾಥರ್ಿಗಳ ಕೌಶಲ ಮತ್ತು ಪ್ರತಿಭೆ ಆಧರಿಸಿ ಉದ್ಯೋಗ ನೀಡಬೇಕು ಎಂದು ಅವರು ಮನವಿ ಮಾಡಿದರು.
ಇಂದಿನ ಉದ್ಯೋಗ ಮೇಳದಲ್ಲಿ ಒಟ್ಟು 30 ಮಂದಿ ಅಂಗವಿಕಲರಿಗೆ ತಲಾ 21 ಸಾವಿರ ರೂಪಾಯಿ ಮಾಸಿಕ ವೇತನದ ಉದ್ಯೋಗ ಕಲ್ಪಿಸಿಕೊಟ್ಟು ಮಾತನಾಡಿದ ವಿಕಲ ಚೇತನ ಈರಪ್ಪ ಕುಲಾಲ್, "ವಿಶೇಷ ಚೇತನರಿಗೆ ಸೂಕ್ತ ತರಬೇತಿ ನೀಡುವ ಜತೆಗೆ ಅವರಿಗೆ ಸಾಧ್ಯವಾದಷ್ಟೂ ಅವರದ್ದೇ ಪ್ರದೇಶದಲ್ಲಿ ಉತ್ತಮ ಉದ್ಯೋಗ ದೊರಕಿಸಿಕೊಡಲು ನಮ್ಮ ಸಂಸ್ಥೆ ಶ್ರಮಿಸುತ್ತಿದೆ. ಇದುವರೆಗೆ 700 ಅಂಗವಿಕರಿಗೆ ಉದ್ಯೋಗ ದೊರಕಿಸಿಕೊಡಲಾಗಿದೆ" ಎಂದು ಹೇಳಿದರು.
ಕಿತ್ತೂರು ಕಲ್ಮಠದ ರಾಜಯೋಗೀಂದ್ರ ಮಡಿವಾಳೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎನ್ಎಸ್ಡಿಸಿ ಕನರ್ಾಟಕ ಮುಖ್ಯಸ್ಥ ಕೌಸ್ತುಭನಾಥ್, ಸಮಾಜಸೇವಕ ರಾಮನಾಥ್ ಮಯ್ಯ, ಕೆಎನ್ವಿವಿಎಸ್ ಕಾರ್ಉದಶರ್ಿ ಜೆ.ವಿ.ವಸ್ತ್ರದ್, ಬಿಜೆಪಿ ಅಧ್ಯಕ್ಷ ಚಿನ್ನಪ್ಪ ಮುತ್ನಾಳ್ ವೇದಿಕೆಯಲ್ಲಿದ್ದರು. ಪ್ರಾಚಾರ್ಯ ಬೊಮ್ಮನಗೌಡರ್ ಸ್ವಾಗತಿಸಿ, ಸ್ಥಾನೀಕರಣ ಅಧಿಕಾರಿ ಕೆ.ಎನ್.ನರಹರಿ ವಂದಿಸಿದರು. ಉಪನ್ಯಾಸಕಿ ಸಂಗೀತಾ ಕಾರ್ಯಕ್ರಮ ನಿರೂಪಿಸಿದರು.