ಕಾಗವಾಡ 12: ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಕ್ರೆಡಿಟ್ ಸೌಹಾರ್ದ ಸಹಕಾರಿಗೆ 2024-25 ಆರ್ಥಿಕ ವರ್ಷದ ಕೊನೆಯಲ್ಲಿ ಒಟ್ಟು 1 ಕೋಟಿ 85 ಲಕ್ಷ 24 ಸಾವಿರದ 944 ರೂಪಾಯಿಗಳ ನಿವ್ಹಳ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಭಮ್ಮಣ್ಣಾ ಚೌಗುಲೆ ತಿಳಿಸಿದ್ದಾರೆ.
ಅವರು, ಶನಿವಾರ ದಿ. 12 ರಂದು ಸಹಕಾರಿಯ ಮುಖ್ಯ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಮಾತನಾಡುತ್ತಿದ್ದರು. ಆರ್ಥಿಕ ವರ್ಷದ ಕೊನೆಗೆ ಮಾರ್ಚ 31 ಕ್ಕೆ ಸಹಕಾರಿಯಲ್ಲಿ ಒಟ್ಟು 3522 ಸದಸ್ಯರಿದ್ದು, 18 ಲಕ್ಷ 58 ಸಾವಿರ ರೂ. ಶೇರ ಬಂಡವಾಳ ಹೊಂದಿದೆ. ಅದರಂತೆ 14 ಕೋಟಿ 28 ಸಾವಿರದ 954 ರೂ. ಕಾಯ್ದಿಟ್ಟ ಮತ್ತು ಇತರೇ ನಿಧಿಗಳನ್ನು ಹೊಂದಿದ್ದು, 128 ಕೋಟಿ 43 ಸಾವಿರದ 970 ರೂ. ಠೇವಣಿ ಸಂಗ್ರಹಿಸಲಾಗಿದೆ. ಇನ್ನೂ 63 ಕೋಟಿ 37 ಲಕ್ಷ 79 ಸಾವಿರದ 310 ರೂ. ಸಾಲ ವಿತರಿಸಿದ್ದು, 10 ಕೋಟಿ 83 ಲಕ್ಷ 86 ಸಾವಿರದ 421 ರೂ. ಬ್ಯಾಂಕ್ ಬ್ಯಾಲನ್ಸ್ ಹೊಂದಿದೆ. ಹಾಗೇಯೇ 70 ಕೋಟಿ 39 ಲಕ್ಷ 94 ಸಾವಿರದ 188 ರೂ. ಹೂಡಿಕೆ ಮಾಡಲಾಗಿದ್ದು, 144 ಕೋಟಿ 4 ಲಕ್ಷ 55 ಸಾವಿರದ 868 ರೂ. ದುಡಿಯುವ ಬಂಡವಾಳ ಹೊಂದಿದ್ದು, ಸಹಕಾರಿಯು ಒಟ್ಟು 9 ಶಾಖೆಗಳನ್ನು ಹೊಂದಿದೆ ಎಂದು ತಿಳಿಸಿದರು.
ಈ ಸಮಯದಲ್ಲಿ ಸಿಬಿಕೆಎಸ್‌ಎಸ್ ಕಾರ್ಖಾನೆ ನಿರ್ದೇಶಕ ಮಹಾವೀರ ಕಾತ್ರಾಳೆ ಸೇರಿದಂತೆ ಸಹಕಾರಿಯ ಉಪಾಧ್ಯಕ್ಷರು, ಸರ್ವ ಸದಸ್ಯರು, ಸಹಕಾರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.