ನವದೆಹಲಿ, ಜ 10, ದೇಶದ ಬಹುತೇಕ ಪ್ರದೇಶಗಳಲ್ಲಿ ಪೌರತ್ವ ವಿರೋಧಿ ಕಾಯ್ದೆ ಪ್ರತಿಭಟನೆ ನೆಪದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿ ಪ್ರಚೋದಿಸಲಾಗಿದ್ದು, ಈ ಕುರಿತ ವಿಡಿಯೋವೊಂದನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ವಿಡಿಯೊದೊಂದಿಗೆ ವೆಬ್‌ಸೈಟ್‌ನ ಲಿಂಕ್ ಅನ್ನು ಟ್ವೀಟ್ ಮಾಡಿ ದೆಹಲಿ ಬಿಜೆಪಿ ವಕ್ತಾರ ತಾಜಿಂದರ್ ಪಾಲ್ ಸಿಂಗ್ ಬಗ್ಗಾ, "ಜಿಹಾನಿ ವಾಲಿ ಆಜಾದಿ ಘೋಷಣೆಗಳು ಶಾಹೀನ್ ಬಾಗ್‌ನಲ್ಲಿ ಎದ್ದಿವೆ. ಸಿಎಎ ವಿರೋಧಿ ಪ್ರತಿಭಟನೆಗಳ ನಿಜವಾದ ಮುಖ ಮತ್ತು ಈ ಘೋಷಣೆಗಳ ಅರ್ಥವೇನು" ಎಂದು ಬರೆದಿದ್ದಾರೆ.ಬಿಜೆಪಿ ನಾಯಕರಾದ ಜಿವಿಎಲ್ ನರಸಿಂಹ ರಾವ್ ಮತ್ತು ಗೌರವ್ ಭಾಟಿಯಾ ಕೂಡ ಸರ್ಕಾರ ವಿರೋಧಿ ಪ್ರತಿಭಟನೆ ಕುರಿತು ಟೀಕಿಸಿದ್ದಾರೆ."ಜಿನ್ನಾ-ವಾಲಿ ಆಜಾದಿ ಪಾಕಿಸ್ತಾನ ಎನ್ನುತ್ತಿರುವ ಜನರು ಆ ರೀತಿಯ ಆಡಳಿತವನ್ನು ಬಯಸಿದರೆ, ಅವರು ಪಾಕಿಸ್ತಾನದ ಪೌರತ್ವವನ್ನು ಪಡೆಯಬಹುದು ಮತ್ತು ಅಲ್ಲಿಗೆ ಹೋಗಿ ಅಲ್ಲಿ ವಾಸಿಸಬಹುದು ಎಂದು ನಾನು ಭಾವಿಸುತ್ತೇನೆ” ಎಂದು ನರಸಿಂಹರಾವ್, ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ."ಈ ಜನರು (ಪ್ರತಿಭಟನಾಕಾರರು) ಕಾಲೇಜು ಕ್ಯಾಂಪಸ್‌ಗಳಲ್ಲಿ ಕಳಂಕವಾಗುತ್ತಿದ್ದಾರೆ ಮಾತ್ರವಲ್ಲ, ಅವರು ಪಾಕಿಸ್ತಾನ ಪ್ರಾಯೋಜಿತ ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಸಹವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.ಮತ್ತೋರ್ವ ಬಿಜೆಪಿ ಮುಖಂಡ ಗೌರವ್ ಭಾಟಿಯಾ ಈ ಜನರು "ರಾಷ್ಟ್ರ ವಿರೋಧಿಗಳಾಗಿದ್ದು, ದೇಶದ ಭದ್ರತೆಗೆ ಧಕ್ಕೆಯುಂಟು ಮಾಡುತ್ತಿದ್ದಾರೆ. ನಮ್ಮ ದೇಶದ ಏಕತೆಯನ್ನು ಮುರಿಯಲು ಬಯಸುತ್ತಿರುವ ಕಾರಣ ಕಾನೂನಿನ ಪ್ರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ತಿಳಿಸಿದ್ದಾರೆ.ವೀಡಿಯೊದಲ್ಲಿನ ವರದಿಗಳು ಶಾಹೀನ್ ಬಾಗ್ ಪ್ರದೇಶದಲ್ಲಿ ನಡೆದ ಸಭೆಯಲ್ಲಿ ಪ್ರತಿಭಟನಾಕಾರರು '' ಹಮ್ ಲಡ್ಕೆ ಲೇಂಗೆ ಆಜಾದಿ. ನೆಹರೂ ವಾಲಿ ಆಜಾದಿ. ಗಾಂಧಿ ವಾಲಿ ಆಜಾದಿ . ಜಿನ್ನಾ ವಾಲಿ ಆಜಾದಿ " ಘೋಷಣೆಗಳನ್ನು ಕೂಗಿದ್ದಾರೆ.ಶಹೀನ್ ಬಾಗ್ ದೆಹಲಿಯ ದಕ್ಷಿಣ ದೆಹಲಿ ಜಿಲ್ಲೆಯ ನೆರೆಹೊರೆಯಾಗಿದ್ದು, ಅಲ್ಪಸಂಖ್ಯಾತ ಸಮುದಾಯ ಜನಸಂಖ್ಯೆಯನ್ನು ಹೊಂದಿದೆ.