ಮರಾಠಾ ಕಿಲ್ಲಾದಲ್ಲಿ ಜೀಜಾಮಾತಾ ಜಯಂತಿ

Jijamata Jayanti at Maratha Killa


ಮರಾಠಾ ಕಿಲ್ಲಾದಲ್ಲಿ ಜೀಜಾಮಾತಾ ಜಯಂತಿ 

ಮಹಾಲಿಂಗಪುರ: ಪಟ್ಟಣದ ವಡಗೇರಿ ಪ್ಲಾಟ್‌ನ ಛತ್ರಪತಿ ಶಿವಾಜಿ ಮಹಾರಾಜರ ಮರಾಠ ಕಿಲ್ಲಾದಲ್ಲಿ ರಾಜ್ಯಮಾತಾ ಜೀಜಾಮಾತಾ ಜಯಂತಿಯನ್ನು ಆಚರಿಸಲಾಯಿತು. 

ಮರಾಠ ಸಮಾಜದ ಅಧ್ಯಕ್ಷ ಮಹೇಶ ಜಾಧವ ಜೀಜಾಮಾತಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ನಮ್ಮ ಕುಲಪುರುಷ, ಹಿಂದೂ ಧರ್ಮ ರಕ್ಷಕ ಛತ್ರಪತಿ ಶಿವಾಜಿಯಂತಹ ಆದರ್ಶ ಮಗನಿಗೆ ಜನ್ಮ ನೀಡಿದ ರಾಜ್ಯಮಾತಾ ಜೀಜಾಮಾತಾ ಆದರ್ಶ ಗುಣಗಳನ್ನು ಇಂದಿನ ತಾಯಂದಿರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು. 

ಹಿರಿಯರಾದ ರಾಮಚಂದ್ರ ಪವಾರ, ಅರ್ಜುನ ಮೋಪಗಾರ, ಮಹಾದೇವ ಸಾವಂತ, ಚಂದ್ರಶೇಖರ ಮೋರೆ, ಸುರೇಶ ಶಿಂಧೆ, ಆನಂದ ಪವಾರ, ನಾಗಪ್ಪ ಪವಾರ, ಮುಕುಂದ ಮೆಂಗಾಣಿ, ರಾಧವ್ವ ರಾ.ಪವಾರ, ಪ್ರೀಯಾಂಕ ಆ.ಪವಾರ ಸೇರಿದಂತೆ ಹಲವರು ಇದ್ದರು.