ರಾಂಚಿ, ಡಿ 20 ಜಾರ್ಖಂಡ್ ನಲ್ಲಿ ಐದನೇ ಹಂತದ ಚುನಾವಣೆಯಲ್ಲಿ
16 ಕ್ಷೇತ್ರಗಳಿಗೆ ಮತದಾನ ಪ್ರಗತಿಯಲ್ಲಿದೆ. ಸುಗಮ
ಮತದಾನಕ್ಕೆ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು 40 ಲಕ್ಷಕ್ಕೂ ಹೆಚ್ಚುಮತದಾರರು29 ಮಹಿಳಾ
ಅಭ್ಯರ್ಥಿಗಳು ಸೇರಿದಂತೆ 237 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಜಾರ್ಮುಂಡಿ ಕ್ಷೇತ್ರದಿಂದ ಅತಿ ಹೆಚ್ಚು 26 ಅಭ್ಯರ್ಥಿಗಳು
ಸ್ಪರ್ಧಿಸಿದ್ದು ಪೊರಿಯಾಹಟ್ ಕ್ಷೇತ್ರದಿಂದ ಅತಿ ಕಡಿಮೆ 7 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಐದು ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೂ
ಉಳಿದ 11 ಕ್ಷೇತ್ರದಲ್ಲಿ ಸಂಜೆ 5 ರವರೆಗೆ ಮತದಾನಕ್ಕೆ ಅವಕಾಶವಿದೆ. ಮಾಜಿ ಮುಖ್ಯಮಂತ್ರಿ ಮತ್ತು ಜೆ ಎಮ್ ಎಮ್ ಹಂಗಾಮಿ ಅಧ್ಯಕ್ಷ
ಹೇಮಂತ್ ಸೊರೇನ್, ಸಚಿವರಾದ ಲೂಯಿಸ್ ಮರಾಂಡಿ, ರಾಧಿರ್ ಸಿಂಗ್, ಇಫ್ರಾನ್ ಅನ್ಸಾರಿ, ಪ್ರದೀಪ್ ಯಾದವ್
ಕಣದಲ್ಲಿರುವ ಪ್ರಮುಖರಾಗಿದ್ದಾರೆ.