ರಾಂಚಿ, ಡಿ 17: ಜಾರ್ಖಂಡ್ ವಿಧಾನಸಭೆಗೆ ಶುಕ್ರವಾರ ಕೊನೆಯ ಹಂತದ ಮತದಾನ ನಡೆಯಲಿದ್ದು, ನಾಳೆಯೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ.ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಬುಧವಾರ ಭೇಟಿ ನೀಡಿ ಕೊನೆಯ ದಿನ, ಕೊನೆಯ ಹಂತದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಅವರ ಮನವೊಲಿಸುವಲ್ಲಿ ಪಕ್ಷ ಅಂತಿಮವಾಗಿ ಯಶಸ್ವಿಯಾಗಿದೆ ಅವರು ರಾಜ್ಯದ ಐದನೇ ಮತ್ತು ಅಂತಿಮ ಹಂತದ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಇದೇ 18 ರಂದು ಸಂತಲ್ ಪರಗಣದಲ್ಲಿ ಚುನಾವಣಾ ಸಭೆಯನ್ನೂ ಉದ್ದೇಶಿಸಿ ಮಾತನಾಡಲಿದ್ದು ಪರಿಣಾಮ ಪಕ್ಷದ ಕಾರ್ಯಕರ್ತರು ಬಹಳ ಉತ್ಸುಕರಾಗಿದ್ದಾರೆ ಎಂದು ಪಕ್ಷದ ವಕ್ತಾರ ದುಬೆ ಹೇಳಿದರು. ಪಕ್ಷದ ಕ್ಷದ ಎಲ್ಲ ಹಿರಿಯ ನಾಯಕರು ಈ ಸಮಯದಲ್ಲಿ ಹಾಜರಿರಲಿದ್ದಾರೆ. ಸಂತಲ್ ಪರಗಣ ವಲಯದ ಎಲ್ಲಾ 16 ಕ್ಷೇತ್ರಗಳಿಗೆ ಶುಕ್ರವಾರ ಕೊನೆಯ ಹಂತದ ಮತದಾನ ನಡೆಯಲಿದೆ.