ಜಾರ್ಖಂಡ್ ಹೈಕೋರ್ಟ್ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ನಿಧನ

ರಾಂಚಿ, ಆ 30     ಜಾರ್ಖಂಡ್ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರು ಇಂದು ಬೆಳಗ್ಗೆ 5.16ಕ್ಕೆ ನಿಧನರಾದರು ಎಂದು ಮೆಡಿಕಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರು ಜಾರ್ಖಂಡ್ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಜಾರ್ಖಂಡ್ ಹೈಕೋರ್ಟ್ನ ಅತಿ ಹಿರಿಯ ನ್ಯಾಯಾಧೀಶರಾಗಿದ್ದರಿಂದ ಅವರಿಗೆ ಈ ಸ್ಥಾನವನ್ನು ವಹಿಸಲಾಗಿತ್ತು. 2009, ಜನವರಿ 21ರಂದು ನ್ಯಾಯಮೂರ್ತಿ ಕುಮಾರ್ ಅವರು ಜಾರ್ಖಂಡ್ ಹೈಕೋರ್ಟ್ ಗೆ ಸೇರ್ಪಡೆಯಾದರು. 2016ರಲ್ಲಿ ಅವರನ್ನು ಅಲಹಾಬಾದ್ ಹೈಕೋರ್ಟ್ ಗೆ ವರ್ಗಾವಣೆ ಮಾಡಲಾಯಿತು. ಆದರೆ ಅವರ ಅನಾರೋಗ್ಯವನ್ನು ಉಲ್ಲೇಖಿಸಿ ತಮ್ಮನ್ನು ಜಾರ್ಖಂಡ್ಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ನಕೊಲ್ಜಿಯಂಗೆ ಒತ್ತಾಯಿಸಿದ್ದರು, ನಂತರ ಅವರನ್ನು ಮತ್ತೊಮ್ಮೆ ಜಾರ್ಖಂಡ್ ಹೈಕೋರ್ಟ್ನಲ್ಲಿ ನೇಮಿಸಲಾಗಿತ್ತು.