ಜಾರ್ಖಂಡ್ ವಿಧಾನಸಭಾ ಚುನಾವಣೆ: ಕೊನೆಯ ಹಂತದಲ್ಲಿ ಮಧ್ಯಾಹ್ನ 1ರವರೆಗೆ ಶೇ 49ರಷ್ಟು ಮತದಾನ

ಜಾರ್ಖಂಡ್, ಡಿ20 ಜಾರ್ಖಂಡ್‍ನಲ್ಲಿ 16 ಕ್ಷೇತ್ರಗಳಿಗೆ ನಡೆಯುತ್ತಿರುವ ಆರನೇ ಹಂತದ ಹಾಗೂ ಕೊನೆಯ ಹಂತದ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಾಹ್ನದ ವೇಳೆಗೆ ಶೇ 49.01ರಷ್ಟು ಮತದಾನವಾಗಿದೆ. ಮಹೇಶ್‍ಪುರದಲ್ಲಿ ಗರಿಷ್ಠ ಶೇ 59.38ರಷ್ಟು ಮತದಾನವಾಗಿದ್ದು, ಡುಮ್ಕಾದಲ್ಲಿ ಕನಿಷ್ಠ ಶೇ 42ರಷ್ಟು ಮತದಾನವಾಗಿದೆ. ಕ್ಷೇತ್ರವಾರು ಶೇಕಡವಾರು ಮತದಾನ ಇಂತಿದೆ: ರಾಜಮಹಲ್ ಶೇ 47.68, ಬೊರಿಯೋ (ಎಸ್‍ಟಿ) ಶೇ 48.23, ಬರ್ಹೆತ್(ಎಸ್‍ಟಿ) ಶೇ 49.72, ಲಿಟ್ಟಿಪಾಡ(ಎಸ್‍ಟಿ) ಶೇ52.97, ಪಕುರ್ ಶೇ 58.38, ಶಿಕಾರಿಪಾಡ(ಎಸ್‍ಟಿ ) ಶೇ 53.18, ನಾಲ ಶೇ 53.54, ಜಮಾತ್ರ ಶೇ51.86, ಜಮಾ(ಎಸ್‍ಟಿ) ಶೇ46.98, ಜರ್ಮುಂಡಿ ಶೇ 45.47, ಸರತ್ ಶೇ 51.36, ಪೊರಿಯಾತ್ ಶೇ 36.01, ಗೊದ್ದ ಶೇ.45.75, ಮಗಮ ಶೇ 45.75ನಕ್ಸಲ್ ಪೀಡಿತ ಬೊರಿಯೋ, ಬರ್ಹೆತ್, ಲಿಟ್ಟಿಪಾದ, ಮಹೇಶ್‍ಪುರ್ ಮತ್ತು ಶಿಕಾರಿಪಾದಲ್ಲಿ ಸಂಜೆ 3ಕ್ಕೆ ಮತದಾನ ಕೊನೆಗೊಳ್ಳಲಿದ್ದು, ಉಳಿದ 11 ಕ್ಷೇತ್ರಗಳಿಗೆ ಸಂಜೆ 5ಕ್ಕೆ ಮತದಾನ ಮುಗಿಯಲಿದೆ.