ಜಾರ್ಖಂಡ್ ವಿಧಾನಸಭಾ ಚುನಾವಣೆ: ಬೆಳಿಗ್ಗೆ 11ರವರೆಗೆ ಶೇ 29.44ರಷ್ಟು ಮತದಾನ

ರಾಂಚಿ, 12  ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೂರನೇ ಹಂತದಲ್ಲಿ ಬೆಳಿಗ್ಗೆ 11 ಗಂಟೆ ವೇಳೆಗೆ ಸರಾಸರಿ ಶೇ 29.44ರಷ್ಟು ಮತದಾನವಾಗಿದೆ. ಈ ಹಂತದಲ್ಲಿ 17 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಖಿರ್ಜಿ ಕ್ಷೇತ್ರದಲ್ಲಿ ಗರಿಷ್ಠ 37.65ರಷ್ಟು, ರಾಂಚಿಯಲ್ಲಿ ಕನಿಷ್ಠ 19.35ರಷ್ಟು ಮತದಾನವಾಗಿದೆ. ಕ್ಷೇತ್ರವಾರು ಮತದಾನದ ಪ್ರಮಾಣ ಇಂತಿದೆ: ಕೊಡೆರ್ಮ ಶೇ 27.30, ಬರ್ಕತಾ ಶೇ 28, ಬರ್ಹಿ ಶೇ34, ಬರ್ಕಾಗಾಂವ್ ಶೇ 29.13, ಮಂಡು ಶೇ 32, ಹಜಾರಿಬಾಗ್ ಶೇ 26, ಸಿಮಾರಿಯಾ(ಎಸ್‍ಸಿ) ಶೇ32.33, ಧನ್‍ವರ್ ಶೇ29.09, ಗೊಮಿಯಾ ಶೇ 33.04, ಬರ್ಮೊ ಶೇ 29.19, ರಾಮ್‍ಗಢ ಶೇ 29.5, ಸಿಲ್ಲಿ ಶೇ36.12, ಖಿರ್ಜಿ (ಎಸ್‍ಟಿ) ಶೇ 37.65, ರಾಂಚಿ ಶೇ 19.35, ಹಟಿಯಾ ಶೇ 23.15, ಕಂಕೆ(ಎಸ್‍ಸಿ) ಶೇ 28.70ರಾಂಚಿ, ಕಂಕೆ, ಹಟಿಯಾ, ರಾಮ್‍ಗಢ ಮತ್ತು ಬರ್ಕತಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದ್ದು, ಉಳಿದ ಕ್ಷೇತ್ರಗಳಲ್ಲಿ ಸಂಜೆ 3 ಗಂಟೆ ವರೆಗೆ ಮತದಾನ ನಡೆಯಲಿದೆ.