ಜಾರ್ಖಂಡ್: ನಾಳೆ ಸ್ಮೃತಿ ಇರಾನಿ, ಧರ್ಮೇಂದ್ರ ಪ್ರಧಾನ್ ಪ್ರಚಾರ

Smriti Irani, Dharmendra Pradhan

ರಾಂಚಿ, ನ ೨೯ - ಜಾರ್ಖಂಡ್ ವಿಧಾನಸಭೆಗೆ ಡಿಸೆಂಬರ್ ೭ರಂದು ನಡೆಯಲಿರುವ ಎರಡನೇ ಹಂತದ ಮತದಾನಕ್ಕಾಗಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಧರ್ಮೇಂದ್ರ ಪ್ರಧಾನ್ ಅವರು ನಾಳೆ ಪ್ರಚಾರ ನಡೆಸಲಿದ್ದಾರೆ

  ಬೆಹರಗೋರಾದಿಂದ ಪ್ರಾರಂಭವಾಗುವ ಮೂರು ಚುನಾವಣಾ ಸಭೆಗಳಲ್ಲಿ ಭಾಗವಹಿಸಲಿರುವ ಸ್ಮೃತಿ ಇರಾನಿ, ಸಾರ್ವಜನಿಕರನ್ನುದ್ದೇಶಿ ಭಾಷಣ ಮಾಡಲಿದ್ದಾರೆ.

ಮತ್ತೊಂದೆಡೆ,  ಧರ್ಮೇಂದ್ರ ಪ್ರಧಾನ್ ಅವರು ಜೈತ್‌ಗರ್, ಚಕರ್‌ಧರಪುರ ಮತ್ತು ಜಮ್‌ಶೆಡ್ಪುರ ಸೇರಿದಂತೆ ಮೂರು ಚುನಾವಣಾ ಸಭೆಗಳನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.