ಗದಗ 02: ತಾಲೂಕಿನ ನರಸಾಪೂರ ಗ್ರಾಮದ ನಾಲತ್ತವಾಡ ಶ್ರೀ ವೀರೇಶ್ವರ ಮಹಾಶಿವಶರಣರ ಮಹಾಮಠದಲ್ಲಿ ಮಾ. 3, ರಂದು ಜಯಂತ್ಯುತ್ಸವ, ರಥೋತ್ಸವ ಹಾಗೂ ಧರ್ಮಸಭೆ ಜರುಗಲಿದೆ.
ಮಾ. 3ರದು ಬೆಳಿಗ್ಗೆ 8ಕ್ಕೆ ಶ್ರೀ ವೀರೇಶ್ವರ ಮಹಾಶಿವಶರಣರ ಮತ್ತು ಶ್ರೀ ಚಂದ್ರಶೇಖರ ಮಹಾಶಿವಶರಣರ ಮೂರ್ತಿಗಳಿಗೆ ಮಹಾರುದ್ರಾಭಿಷೇಕ ನೆರವೇರಲಿದೆ. ಸಂಜೆ 5ಕ್ಕೆ ವೀರೇಶ್ವರ ಭಾವಚಿತ್ರದೊಂದಿಗೆ ಗುಗ್ಗಳ ಕಾರ್ಯಕ್ರಮ ಜರುಗಲಿದೆ.
ಮಾ. 4ರಂದು ಬೆಳಿಗ್ಗೆ ಷಟಸ್ಥಲ ಧ್ವಜರೋಹಣ ನೆರವೇರಲಿದ್ದು, ಅಡ್ನೂರು-ರಾಜೂರು ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧರ್ಮಸಭೆ ಜರುಗಲಿದೆ. ಶ್ರೀ ವೀರೇಶ್ವರ ಮಹಾಶಿವಶರಣರ ಮಠದ ಶಿವಕುಮಾರ ಶರಣರು ನೇತೃತ್ವ ವಹಿಸುವರು. ಮಧ್ಯಾಹ್ನ 2ಕ್ಕೆ ಮಹಾಪ್ರಸಾದ ನೆರವೇರಲಿದೆ.
ಸಂಜೆ 5ಕ್ಕೆ ಶ್ರೀ ವೀರೇಶ್ವರ ಮಹಾಶಿವಶರಣರ ರಥೋತ್ಸವ ಜರುಗಲಿದೆ. ಮಾ. 5ರಂದು ಎಳಿಗ್ಗೆ 10ಕ್ಕೆ ಕಡುಬಿನ ಕಾಳಗ ನೆರವೇರಲಿದ್ದು ಸಕಲ ಸದ್ಭಕ್ತರು ಪಾಲ್ಗೊಳ್ಳಬೇಖು ಎಂದು ಶ್ರೀ ವೀರೇಶ್ವರ ಮಹಾಶಿವಶರಣರ ಮಠದ ಶಿವಕುಮಾರ ಶರಣರು ತಿಳಿಸಿದ್ದಾರೆ.