ಹುಬ್ಬಳ್ಳಿ 15: ಗದಗನಲ್ಲಿರುವ ಪ್ರಸಿದ್ದ ಸಂಗೀತ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಸ್ಥಾಪಕರು, ಪದ್ಮಭೂಷಣಡಾ. ಪುಟ್ಟರಾಜ ಗವಾಯಿಗಳ ಗುರುಗಳು, ಗಾನಯೋಗಿ ಶ್ರೀ ಪಂಚಾಕ್ಷರಿ ಗವಾಯಿಗಳು ಅವರ ಜಯಂತೋತ್ಸವದ ನಿಮಿತ್ತ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಗಾನಯೋಗಿ ಶ್ರೀ ಪಂಚಾಕ್ಷರಿ ಗವಾಯಿಗಳ ಭಾವಚಿತ್ರಕ್ಕೆ ಮಾಲಾರೆ್ಣ ಮಾಡಿ ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸುವುದರ ಮೂಲಕ ಗೌರವಾರೆ್ಣ ಸಲ್ಲಿಸಲಾಯಿತು.
ತಬಲಾ ಕಲಾವಿಧಡಾ. ನಾಗಲಿಂಗ ಮುರಗಿ, ಸರಸ್ವತಿ ಪೊಲೀಸಪಾಟೀಲ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯಜಿಲ್ಲಾಘಟಕದಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನಜಿಲ್ಲಾಘಟಕದಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ, ಬಸವರಾಜ, ಮುಂತಾದವರು ಭಾಗವಹಿಸಿದ್ದರು.