ಡಾ.ಶ್ರೀನಿವಾಸ ರಾಮಾನುಜನ್ರವರ ಜಯಂತ್ಯೊತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ

ಮುದ್ದೇಬಿಹಾಳ, 30: ರಾಮಾನುಜನ್ ಗಣೀತದ ಅನಂತಗಳ ಸರಣಿ ಕಂಡುಹಿಡಿದು ವಿಜ್ಞಾನ ಹಾಗೂ  ಇಂಜನೀಯರಿಂಗ್ ಕ್ಷೇತ್ರಕ್ಕೆ ಅಡಿಪಾಯ ಸೃಷ್ಟಿಸಿ ದೇಶದ ಕೀತರ್ಿ ಪತಾಕೆಯನ್ನು ವಿಶ್ವದೆತ್ತರಕ್ಕೆ ಕೊಂಡೊಯ್ಯರೆಂದು ಸಾಹಿತಿಗಳಾದ ಆರ್.ಜಿ.ಕಿತ್ತೂರು ರವರು ಹೇಳಿದರು.   

      ಅವರು ಪಟ್ಟಣದ ಹಾರ್ವಡರ್್ ಪಿ.ಯು. ಸೈನ್ಸ್ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಶ್ರೀನಿವಾಸ ರಾಮಾನುಜನ್ರವರ ಜಯಂತೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ರಾಮಾನುಜನ್ ಬದುಕಿದ್ದು ಕೇವಲ 32ವರ್ಷ.  ಅವರು ಬಾಲಕನಾಗಿದ್ದಾಗ ಶಾಲೆಯಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಂದಾಗಿ ಶಿಕ್ಷಕರು ಹತ್ತು ಬಾರಿ ಓದಿಕೊಂಡು ಪಾಠ ಮಾಡಲು ಮುಂದಾಗುತ್ತಿದ್ದರು. ಅವರ ಕೆಲವು ಪ್ರಶ್ನೆಗಳಿಗೆ ಶಿಕ್ಷಕರು ಬಳಿಯೂ ಉತ್ತರವಿರಲಿಲ್ಲ. ಅಂಥ ಅದ್ಭುತ ಪ್ರತಿಭೆ ಅವರದಾಗಿತ್ತು; ಮನೆಯಲ್ಲಿ ಬಡತನವಿದ್ದರೂ ಅದನ್ನು ಮೆಟ್ಟಿ ನಿಂತರು.  ಜೀವನಕ್ಕಾಗಿ ಮದ್ರಾಸ ಹಡಗುಕಟ್ಟೆಯಲ್ಲಿ ಗುಮಾಸ್ತ  ಕೆಲಸ ಮಾಡುತ್ತಲೇ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದರು; ಸುಮಾರು 120 ಥೇರಮ್ಗಳನ್ನು ಬರೆದು ಅವುಗಳನ್ನು ಪ್ರೂವ್ ಮಾಡಿ ತೋರಿಸಿದರು. ಇದರಿಂದ ಪ್ರಭಾವಿತರಾದ ಇಂಗ್ಲೆಂಡಿನ ಕೇಂಬ್ರಿಡ್ಜ್ ಕಾಲೇಜಿನ  ಗಣೀತ ತಜ್ಞ ಜಿ.ಎಚ್.ಹಾಡರ್ಿ ತಮ್ಮ ದೇಶಕ್ಕೆ ಕರೆಸಿಕೊಂಡು ಅವರ ಸಂಶೋಧನೆಗೆ ನೆರವಾದರು. ಇದರಿಂದ ಅವರ ಸಂಶೋಧನೆಗಳು 2014ರಲ್ಲಿ ಅಂತರಾಷ್ಟ್ರೀಯ ಜರ್ನಲ್ನಲ್ಲಿ ಪ್ರಕಟಗೊಂಡವು. ಅವರಿಗೆ ಗಣೀತ ಬಿಟ್ಟು ಬೇರಾವ ವಿಷಯದ ಬಗ್ಗೆ ಆಸಕ್ತಿ ಇರಲಿಲ್ಲ; ಹಾಗಾಗಿ ಕೆಲವು ಶೈಕ್ಷಣಿಕ ಅರ್ಹತೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಇಷ್ಟಾದರೂ ಅವರ ಸಾಧನೆ ಮನಗಂಡು ಲಂಡನ್ನ ರಾಯಲ್ ಸೋಸೈಟಿ ಇವರಿಗಾಗಿ ತನ್ನ ನಿಯಮವನ್ನೇ ಸಡಿಲಿಸಿ ಸದಸ್ಯತ್ವ ನೀಡಿತೆಂದು ಅವರು ಹೇಳಿದರು. 

       ಸಮಾರಂಭವನ್ನು ಉದ್ಘಾಟಿಸಿದ ಬೆಂಗಳೂರಿನ ಬಿಬಿಎಂಪಿ ವಿಶ್ರಾಂತ ವೈದ್ಯಾಧಿಕಾರಿಗಳಾದ ಡಾ. ಸಿ.ಎಚ್.ನಾಗರಬೆಟ್ಟ ರವರು ಮಾತನಾಡುತ್ತ, ಸಾಮಾನ್ಯವಾಗಿ ಎಲ್ಲರೂ  ವಿದ್ಯಾಥರ್ಿಗಳ ಜೀವನ ಬಂಗಾರದ ಜೀವನವೆಂದು ಹೇಳುವುದರಲ್ಲಿ ಅರ್ಥವಿದೆ. ಹೇಗೆಂದರೆ ಓದುವ ವಯಸ್ಸಲ್ಲಿ ವಿದ್ಯಾಥರ್ಿಯಾದವನಿಗೆ ಯಾವ ಚಿಂತೆಗಳು ಇರುವುದಿಲ್ಲ. ತಂದೆತಾಯಿಂದಿರು ಅಗತ್ಯವಾದ ಹಣವನ್ನು ಸಾಲ ಮಾಡಿಯಾದರೂ ಹೊಂದಿಸಿ ಕಳಿಸುತ್ತಾರೆ. ಹಾಗಾಗಿ ಅವರಿಗೆ ಓದುವುದೊಂದೇ ಚಿಂತನೆಯಾಗಬೇಕು. ಇನ್ನು ಜ್ಞಾನಗಳಿಸಲು ಯಾವುದೇ ಟಾನಿಕ್, ಔಷಧಿಯಿಲ್ಲ. ಹಾಗಾಗಿ ಬೇರಾವ ವಿಚಾರಗಳನ್ನು ತಲೆಯಲ್ಲಿ ಹಾಕಿಕೊಳ್ಳದೇ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡಿದರೆ ಜ್ಞಾನ, ಯಶಸ್ಸು ಸಾಧ್ಯವೆಂದು ಅವರು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಎಸ್.ಎಂ.ನೆರಬೆಂಚಿ ರವರು ಮಾತನಾಡುತ್ತ ಓದಿಗೆ ಮನಸ್ಸಿನ ಏಕಾಗ್ರತೆ ಬಹಳ ಮುಖ್ಯವಾಗಿದೆ. ಹಾಗಾಗಿ ಏಕಾಗ್ರತೆ ಉಳಿಸಿಕೊಂಡು ತಮ್ಮ ಓದಿನ ವಿಷಯಗಳ ಕಡೆಗೆ ನಿರಂತರ ಗಮನ ಕೊಡುವುದರಿಂದ ಯಶಸ್ಸು ನಿಮ್ಮದಾಗುತ್ತದೆ; ನೀವು ಉದ್ಯೋಗಕ್ಕೆ ಸೇರಿಕೊಂಡ ನಂತರವೇ ಇತರ ಪ್ರವೃತ್ತಿಗಳ ಕಡೆಗೆ  ಯೋಚಿಸಬೇಕೆಂದು ಅವರು ಹೇಳಿದರು. 

     ಇದೇ ಸಂದರ್ಭದಲ್ಲಿ ವೈದ್ಯರಾದ ಡಾ. ಸಿ.ಎಚ್.ನಾಗರಬೆಟ್ಟ ಹಾಗೂ ಸಾಹಿತಿ ಆರ್.ಜಿ.ಕಿತ್ತೂರು ರವರನ್ನು ಸಂಸ್ಥೆವತಿಯಿಂದ ಫಲಪುಷ್ಪ ಕೊಟ್ಟು ಶಾಲುಹೊದಿಸಿ ಸನ್ಮಾನಿಸಲಾಯಿತು. ಅಲ್ಲದೇ ಗಣಿತ ವಿಷಯದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾಥರ್ಿಗಳಾದ ಅಪೇಕ್ಷಾ ದುವರ್ೇ ಹಾಗೂ ಪ್ರಶಾಂತ ಪೂಜಾರಿಗೆ ಪ್ರಥಮ ಬಹುಮಾನವನ್ನು ಮತ್ತು ಪ್ರೀತಿ ದೊಡಮನಿ ಹಾಗೂ ವಿಶ್ವನಾಥ ಲಮಾಣಿ ವಿದ್ಯಾಥರ್ಿಗೆ ದ್ವಿತೀಯ ಬಹುಮಾನವನ್ನು ಕೊಡಲಾಯಿತು.   

      ವೇದಿಕೆಯ ಮೇಲೆ  ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಆರ್.ಬಿ.ರೂಡಗಿ ಉಪಸ್ಥಿತರಿದ್ದರು.  ಸಮಾರಂಭದಲ್ಲಿ ಉಪನ್ಯಾಸಕರಾದ ಎಸ್.ವಿ.ಕುಲಕಣರ್ಿ, ಪಿ.ಡಿ.ಕುಲಕಣರ್ಿ, ಶ್ರೀಮತಿ ಆರ್.ಎಸ್.ಮೇಟಿ  ಮತ್ತು ವಿದ್ಯಾಥರ್ಿ, ವಿದ್ಯಾಥರ್ಿನಿಯರು ಭಾಗವಹಿಸಿದ್ದರು. ನಂತರ ಎಲ್ಲರಿಗೂ ಸಿಹಿತಿಂಡಿಗಳನ್ನು ಹಂಚಲಾಯಿತು. ಉಪನ್ಯಾಸಕ ಎಂ. ಎಸ್. ಹುಣಶ್ಯಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.