ಬಾಗಲಕೋಟೆ14: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಜಿ.ಪಂ ಉಪಕಾರ್ಯದಶರ್ಿ ಎ.ಜಿ.ತೋಟದ ಪೂಜೆ ಸಲ್ಲಿಸಿ ಪುಷ್ಪ ಅಪರ್ಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹಾಗೂ ಸಮಾಜದ ಮುಖಂಡರಾದ ಎಂ.ಟಿ.ಪಾಟೀಲ, ಕುಶಾಲ ಸತ್ಯನಾರಾಯಣ, ಕಾಂತಪ್ಪ ಇಳಗೇರ, ಬಾಲರೆಡ್ಡಿ ಇಳಗೇರ, ಯಲ್ಲಪ್ಪ ಇಳಗೇರ, ಲಕ್ಷ್ಮಣ ಇಳಗೇರ, ಶ್ರೀನಿವಾಸ, ಮಾರುತಿ, ಅಮರ ಸೇರಿದಂತೆ ಇತರರು ಉಪಸ್ಥಿತರಿದ್ದರು