ಲೋಕದರ್ಶನ ವರದಿ
ಮಾಂಜರಿ ದಿ 14: ಭಾರತದ ಅದ್ಬುತ ಶಕ್ತಿಯಾಗಿ ಯುವಕರ ಕನ್ಮಣಿಯಾಗಿ ಯುಗಯುಗಕ್ಕೂ ಮರೆಯದ ಇತಿಹಾಸ ಬರೆದ ಸ್ವಾಮಿ ವಿವೆಕಾನಂದರು ಈ ದೆಶದ ಸ್ವಾಭಿಮಾನದ ಶೀಖರ ಎಂದು ಪ. ಪೂ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಜಿಗಳು ಹೇಳಿದರು
ಅವರು ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಭಗತ ಸಿಂಗ ಯುವಕ ಮಂಡಳದ ಸಹಯೋಗದಲ್ಲಿ ಇಂದು ಆದಿನಾತ ಶಿಕ್ಷಣ ಸಂಸ್ಥೆಯ ಸಭಾಗೃಹದಲ್ಲಿ ಆಯೋಜಿಸಲಾದ ಯುವ ಸಪ್ತಾಹ ಹಾಗೂ ಸ್ವಮಿ ವಿವೆಕಾನಂದರ ಜಯಂತಿಯ ದಿವ್ಯ ಸಾನಿಧ್ಯ ವಹಿಸಿ ಮತಣಾಡುತ್ತಿದ್ದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಿವೃತ್ತ ಮುಖ್ಯಾಧ್ಯಾಪಕ ಜಿ.ಸಿ.ಮಾಲಗಾರ ವಹಿಸಿದ್ದರು
ವಿವೇಕಾನಂದರು ನಂಬಿಕೆ ಇರಿಸಿದ್ದ ದೇಶದ ಯುವ ಸಂಪತ್ತು ಇಂದು ಮೊಬೈಲ್ ಗೀಳಿಗೆ ಬಿದ್ದು ಮಾನಸಿಕವಾಗಿ, ದೈಹಿಕವಾಗಿ ಅನಾರೋಗ್ಯಕ್ಕಿಡಾಗುತ್ತಿದ್ದಾರೆ. ವರದಿಯಂತೆ ಮುಂದಿನ 5 ವರ್ಷಗಳಲ್ಲಿ ಭಾರತದ 37% ಯುವಜನರು ಕಣ್ಣಿನ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಲಿದ್ದಾರೆ ಎಂದು ಅವರು ವಿಷಾದಿಸಿದರು ಅವರು ಯುವಕರು ಎಚ್ಚೆತ್ತುಕೊಂಡು ದೈಹಿಕವಾಗಿ, ಮಾನಸಿಕವಾಗಿ, ಶೈಕ್ಷಣಿಕವಾಗಿ, ನೈತಿಕವಾಗಿ ಆರೋಗ್ಯವಂತರಾಗಬೇಕು. ಜೊತೆಗೆ ಗುರಿ ತಲುಪುವ ಹಂಬಲ ಸದಾಶಯದೊಂದಿಗೆ ಕರ್ತವ್ಯನಿರತರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ದೇಶದಲ್ಲಿ 365 ದಿನವೂ ಸ್ಮರಣಾರ್ಹವಾದ ಇತಿಹಾಸದ ವ್ಯಕ್ತಿ ಮತ್ತು ಶಕ್ತಿಯೆಂದರೆ ಅದು ವಿವೇಕಾನಂದರು ಮಾತ್ರ. ಹಾರ್ವರ್ಡ ವಿಶ್ವವಿದ್ಯಾಲಯದ ಭಾಷಣದಲ್ಲಿ ಸಂನ್ಯಾಸಿ ಸಂತ ಭಾರತದಲ್ಲಿ ಯುವಕರೇ ಹೆಚ್ಚು ಎಂದು ಹೇಳಿದ್ದರು. ಆ ಯುವಜನತೆ ಇಂದು ಸೋಮಾರಿತನ, ಅಹಂಕಾರವನ್ನು ತೊಲಗಿಸಿ ದೇಶ ನನ್ನದು, ದೇಶದಲ್ಲಿರುವವರೆಲ್ಲ ನನ್ನವರೆಂಬ ಭಾವದಲ್ಲಿ ಬದುಕಬೇಕು. ಅದು ಸುಸಂಸ್ಕೃತವಾದ ಶಿಕ್ಷಣದಿಂದ ಮಾತ್ರವೇ ಸಾಧ್ಯವೆಂದು ಹೇಳಿದರು.ಈ ಕಾರ್ಯಕ್ರಮಕ್ಕೆ ಇತ್ತಿಚಿಗೆ ಕೆ.ಎ.ಎಸ್. ಆಯ್ಕೆಯಾಗಿದ್ದ ಅಧಿಖಾರಿಗಳಾದ ರವೀಂದ್ರ ಪಾಟಿಲ (ಜುಗೂಳ) ವಿಸ್ವೇಶ್ವರ ಬದರಗಡೆ(ಬೋರಗಾಂವ), ಸ್ವೇತಾ ಬಿಡಿಕರ (ಚಿಕ್ಕೋಡಿ) ಹಾಗೂ ಅಮಿತ ತಾರದಾಳೆ(ಇಂಗಳಿ) 0ವರನ್ನು ಸನ್ಮಾನಿಸಲಾಯಿತು ಈ ಕಾರ್ಯಕ್ರಮಕ್ಕೆ ಗ್ರಾಮದ ಮುಖಂಡರು ಹಿರಿಯರು ಹಗೂ ವಿವಿಧ ಸಂಸ್ಥೆಯ ಪದಾಧಿಖಾರಿಳು ಹಾಗೂ ಗ್ರಾಮಸ್ಥರು ಹಾಜರಿದ್ದರು.