ಕಾಗವಾಡ 21: ಕಲ್ಲಪ್ಪಣ್ಣಾ ಅವಾಡೆ ಜವಾಹರ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆ ಲಿ., ಹುಪರಿ ಇವರು 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ದಾಖಲೆಯ 13.53 ಲಕ್ಷ ಮೆ.ಟನ್ ಕಬ್ಬು ನುರಿಸಿ, ರೈತರಿಗೆ ಈಗಾಗಲೇ ರೂ. 3150 ರಂತೆ ಬಿಲ್ ಪಾವತಿಸಲಾಗಿದೆ. ಜೊತೆಗೆ ಪ್ರತಿ ಟನ್ ಕಬ್ಬಿಗೆ 500 ಗ್ರಾಂ. ನಂತೆ ಸಕ್ಕರೆ ಕೂಡಾ ವಿತರಿಸಲಿದ್ದು, ಈಗ ಸಕ್ಕರೆ ಕಾರ್ಡಗಳನ್ನು ವಿತರಿಸಲಾಗುತ್ತಿದೆಯೆಂದು ಮುಖಂಡ ಅಶೋಕ ಕಾತ್ರಾಳೆ ತಿಳಿಸಿದ್ದಾರೆ.
ಅವರು ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಶುಕ್ರವಾರ ದಿ. 21 ರಂದು ಕಾರ್ಖಾನೆಯ ಅಕಿವಾಟ ವೃತ್ತ ವ್ಯಾಪ್ತಿಯ ಶಿರಗುಪ್ಪಿ, ಯಡೂರ, ಚಂದೂರ, ಮಾಂಜರಿ, ಜುಗೂಳ, ಮಂಗಾವತಿ, ಶಹಾಪೂರ, ಇಂಗಳಿ ಮತ್ತು ಮೊಳವಾಡ ಗ್ರಾಮದ ರೈತ ಸದಸ್ಯರಿಗೆ ಹಾಗೂ ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ಕಾರ್ಡಗಳನ್ನು ವಿತರಿಸಿ, ಮಾತನಾಡುತ್ತಿದ್ದರು. ಪ್ರತಿಯೊಬ್ಬ ರೈತರಿಗೆ ಸಕ್ಕರೆ ಕಾರ್ಡಗಳನ್ನು ಪಡೆದುಕೊಳ್ಳಲು ತಿಳಿಸಲಾಗಿದ್ದು, ಕಾರ್ಡಗಳನ್ನು ಪಡೆಯದೇ ಇದ್ದ ರೈತರು ಕಾರ್ಖಾನೆಯ ಸ್ಥಾನಿಕ ಕಚೇರಿಯ ಸಿಬ್ಬಂದಿಗಳನ್ನು ಸಂಪರ್ಕಿಸಿ, ತಮ್ಮ ಕಾರ್ಡುಗಳನ್ನು ಪಡೆದುಕೊಳ್ಳಬೇಕೆಂದು ಸೂಚಿಸಿದರು.
ಮುಖ್ಯ ಅತಿಥಿಗಳಾಗಿ ಕಾರ್ಖಾನೆಯ ನಿರ್ದೇಶಕ ಸಂಜಯಕುಮಾರ ಕೋಥಳಿ ಸೇರಿದಂತೆ ಮುಖಂಡರಾದ ಅಭಯಕುಮಾರ ಅಕಿವಾಟೆ, ಅಪ್ಪಾಸಾಬ ಪಾಟೀಲ, ತಾತ್ಯಾಸಾಬ ಚೌಗುಲೆ, ಪಾರೀಸಾ ಪೊದಾಲೆ, ಭರತ ಲಾಂಡಗೆ ಹಾಗೂ ಕಾರ್ಖಾನೆಯ ಅಕಿವಾಟ ವೃತ್ತದ ಅಗ್ರಿ ಓರಕರ್ ಅಸ್ಲಂ ತಾಂಬೋಳೆ, ಸಿಬ್ಬಂದಿಗಳಾದ ಭರತ ಮದಭಾವೆ, ಕಿರಣ ಮಗ್ಗೆನ್ನವರ, ಸಂಧೀಪ ಕೋಥಳಿ, ಸುರಜ ನರವಾಡೆ, ಸುನೀಲ ದಿವಟೆ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.