ಬೆನಕನಹಳ್ಳಿ ಗ್ರಾ ಪಂ ಉಪಾಧ್ಯಕ್ಷರಾಗಿ ಜಟ್ಟಿಂಗರಾಯ ಅವಿರೋಧ ಆಯ್ಕೆ
ಲೋಕದರ್ಶನ ವರದಿ
ಇಂಡಿ 01: ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಶ್ರೀ ಜಟ್ಟಿಂಗರಾಯ ಬಿರಾದಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೆ ದಿ.28ರಂದು ಬೆಳಿಗ್ಗೆ ಹತ್ತು ಗಂಟೆಗೆ ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗುರುತು ಪಡಿಸಲುಪಟ್ಟ ಚುನಾವಣೆ ಅಧಿಕಾರಿ ನಂದೀಪ್ ರಾಠೋಡ ಅವರು ಚುನಾವಣೆ ಪ್ರಕ್ರಿಯೆ ಆರಂಭಿಸಿದರು. ಮೊದಲು ಚುನಾವಣೆ ನಿಮಿತ್ತವಾಗಿ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಸಭೆ ನಡೆಸಿದರು.
ಒಟ್ಟು 16 ಸದಸ್ಯರ ಸಂಖ್ಯಾ ಬಲ ಇದು ಆಗಿದ್ದು ಆ ಹದಿನಾರು ಸದಸ್ಯರು ಹಾಜರಿದ್ದರು. ಕೊರಂ ಭರತಿ ಆದ ಕಾರಣ ಚುನಾವಣೆ ಅಧಿಕಾರಿಗಳು ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಆರಂಬಿಸಿ ನಾಮಪತ್ರ ಸಲ್ಲಿಕೆ ಅವಕಾಶ ಕಲ್ಪಿಸಿದ್ದರು, ಉಪಾಧ್ಯಕ್ಷ ಸ್ಥಾನಕ್ಕೆ ಜಟ್ಟಿಂಗರಾಯ ಭೀಮರಾಯ ಬಿರಾದಾರ ಒಬ್ಬರೇ ಮಾತ್ರ ನಾಮಪತ್ರ ಸಲ್ಲಿಸಿದರು.ಎಲ್ಲ ಸದಸ್ಯರ ಗಮನಕ್ಕೆ ತಂದು ಉಪಾಧ್ಯಕ್ಷ ಸ್ಥಾನಕ್ಕೆ ಜಟ್ಟಿಂಗರಾಯ ಭೀಮರಾಯ ಬಿರಾದಾರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಜಟ್ಟಿಂಗರಾಯ ಭೀಮರಾಯ ಬಿರಾದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಧಿಕಾರಿ ನಂದೀಪ್ ರಾಠೋಡ ಅವರು ಘೋಷಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಜಟ್ಟಿಂಗರಾಯ ಬಿರಾದಾರ ಅವರನ್ನು ಸನ್ಮಾನಿಸಿದರು.
ಈ ಮೊದಲು ಉಪಾಧ್ಯಕ್ಷ ನಿಂಗನಗೌಡ ಶಂಕರಗೌಡ ಪಾಟೀಲ ಅವರು ರಾಜೀನಾಮೆ ನೀಡಿದ್ದರಿಂದ, ಆ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾರಾಣಿ ನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕವಿತಾ ಭಜಂತ್ರಿ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ರತ್ನಾಬಾಯಿ ಚಿಮ್ಮಗೋಳ, ಭಾರತಿ ಲೋಣಿ, ಶಾಂತಾಬಾಯಿ ಯರಗಂಟಿ, ಬಸವರಾಜ ಲೋಣಿ, ಸಿದ್ದಮ್ಮ ಕೆಂಭಾವಿ, ಯಾಸ್ಮಿನ್ ಮುಲ್ಲಾ, ಸಂಜೀವ ಶಿವಪೂಜೆ, ಸಂಗಿತಾ ಬಿರಾದಾರ, ಶ್ರೀದೇವಿ ಮಸಳಿ, ರಾಯಗೊಂಡ ಅಂಕಲಗಿ, ಮಲ್ಲಮ್ಮ ಹೊನಕಟ್ಟಿ, ಕಾಶಿನಾಥ ಹಚ್ಚಡದ, ಬೀರ್ಪ ಚಾಕರಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.