ಘಟಪ್ರಭಾ 01: ಇಲ್ಲಿಯ ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತಯಿಂದ ಪ್ಲಾಸ್ಟಿಕ ನಿಷೇದ ಹಾಗೂ ಡೆಂಗ್ಯೂ ಜ್ವರದ ಮಾಹಿತಿ ಕುರಿತು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ಮಾಡಲಾಯಿತು.
ಮಲ್ಲಾಪೂರ ಪಿಜಿ ಪ.ಪಂ ಹಾಗೂ ಆಶಾ ಕಾರ್ಯಕರ್ತರ ನೇತೃತ್ವದಲ್ಲಿ ಜಾಥಾ ನಡೆಸಿಲಾಯಿತು. ಸದರಿ ಜಾಥಾದಲ್ಲಿ ಪ್ಲಾಸ್ಟಿಕ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಡೆಂಗ್ಯೂ ಜ್ವರ ಹರಡುವ ಹಾಗೂ ಡೆಂಗ್ಯೂ ಜ್ವರ ಹರಡದಂತೆ ತಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ರಸ್ತೆಗಳಲ್ಲಿ ಜಾಥಾ ಜರುಸಲಾಯಿತು.
ಪ. ಪಂ. ಮುಖ್ಯಾಧಿಕಾರಿಗಳಾದ ಕೆ. ಬಿ. ಪಾಟೀಲ. ಸಿಬ್ಬಂದಿಗಳಾದ ಲಕ್ಷ್ಮಣ ಹುಣಶ್ಯಾಳ, ಅನೀಲ ಕಾಂಬಳೆ,. ಸರೂಜಾ ಸಂಕಾನಟ್ಟಿ, ರಾಜು ಸದಲಗಿ, ರಮೇಶ ತಂಗೆವ್ವಗೋಳ, ಅಕ್ಷಯ ಮಾನಗಾಂವಿ, ವಿಠ್ಠಲ ವಗ್ಗನ್ನವರ, ರಾಮು ಬೆಲ್ಲದ, ಪೌರಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.