ಡೆಂಗ್ಯೂ ಜಾಗೃತಿಗೆ ನಗರದಲ್ಲಿ ಜಾಥಾ

ಹಾವೇರಿ23: ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಡಿಯಲ್ಲಿ ಜುಲೈ-2018 ಡೆಂಗ್ಯೂ ವಿರೋಧಿ ಮಾಸಿಕ ಅಂಗವಾಗಿ  ಆಯೋಜಿಸಿಸಲಾದ ಜಾಥಾ ಕಾರ್ಯಕ್ರಮಕ್ಕೆ ಸೋಮವಾರ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ. ಜಯಾನಂದ ಅವರು ಚಾಲನೆ ನೀಡಿದರು. 

ಅವರು ಮಾತನಾಡಿ, ಡೆಂಗ್ಯೂ ರೋಗ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಿಂದ ವಿವಿಧ ಇಲಾಖೆಯ ಸಹಕಾರದೊಂದಿಗೆ ಸೊಳ್ಳೆಗಳ ನಾಶ ಮತ್ತು ರೋಗ ಹರಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಡೆಂಗ್ಯೂ ನಿಯಂತ್ರಣಕ್ಕೆ ತಮ್ಮ ವಾಸ ಸ್ಥಳದ ಸುತ್ತ ಮುತ್ತ ಪರಿಸರ ಸ್ವಚ್ಛವಾಗಿಟ್ಟುಕೊಂಡು ನೀರು ನಿಲ್ಲುವ, ಒಡೆದ ಚಿಪ್ಪು, ಬಾಟಲಿ, ಟೈರ್, ಹೂ ಕುಂಡಲಿಗಳಲ್ಲಿ ಸಂಸ್ಕರಿತ ನೀಡಿನಲ್ಲಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ನೋಡಿಕೊಳ್ಳುವಂತೆ ಜಾಗೃತಿ ಮೂಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಸುಹೀಲ ಹರವಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಜಿಲ್ಲಾ ಸವರ್ೇಕ್ಷಣಾಧಿಕಾರಿ ಡಾ. ಜಗದೀಶ ಪಾಟೀಲ, ಶಂಕರ ಎಫ್. ಸುತಾರ, ಸಿ ಎಫ್ ಹೆಡಿಯಾಲ, ಕಾನಬಸಣ್ಣನವರ, ಮಲ್ಲಿಕಾಜರ್ುನ ಮಡಿವಾಳರ, ನಸರ್ಿಂಗ್ ಕಾಲೇಜ್ನ ಉಪನ್ಯಾಸಕರು ,ಕನಕದಾಸ ಪ್ರೌಢಶಾಲೆ ಶಿಕ್ಷಕರು ಸೇರಿದಂತೆ ಇತರರು ಭಾಗವಹಿಸಿದ್ದರು.