ಟೆಸ್ಟ್ ಕ್ರಿಕೆಟ್ನಲ್ಲಿ 50 ವಿಕೆಟ್ ಸಾಧನೆ ಮಾಡಿದ ಜಸ್ಪ್ರಿತ್ ಬುಮ್ರಾ

ಅಂಟಿಗುವಾ, ಆ 24   ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ವೇಗಿ ಜಸ್ಪ್ರಿತ್ ಬುಮ್ರಾ ಅವರು ವೇಗವಾಗಿ 50 ವಿಕೆಟ್ ಕಿತ್ತ ಭಾರತದ ಮೊದಲನೇ ಬೌಲರ್ ಎಂಬ ಸಾಧನೆ ಮಾಡಿದರು.   25ರ ಪ್ರಾಯದ ಬುಮ್ರಾ ಈ ಸಾಧನೆ ಮಾಡಲು ಕೇವಲ 11 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಈ ಹಿಂದೆ 13 ಪಂದ್ಯಗಳಲ್ಲಿ 50 ವಿಕೆಟ್ ಕಿತ್ತು ಸಾಧನೆ ಮಾಡಿದ್ದ ವೆಂಕಟೇಶ್ ಪ್ರಸಾದ್ ಹಾಗೂ ಮೊಹಮ್ಮದ್ ಶಮಿ ಅವರನ್ನು ಬುಮ್ರಾ ಶುಕ್ರವಾರ ಹಿಂದಿಕ್ಕಿದರು. 30ನೇ ಓವರ್ನಲ್ಲಿ ಜಸ್ಪ್ರಿತ್ ಬುಮ್ರಾ ಅವರು ಡೆರೆನ್ ಬ್ರಾವೊ ಅವರ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ವೃತ್ತಿ ಜೀವನದಲ್ಲಿ 50 ವಿಕೆಟ್ಗಳನ್ನು ತನ್ನ ಖಾತೆಗೆ ಸೇರಿಸಿಕೊಂಡರು.  ಈ ಪಂದ್ಯದಲ್ಲಿ ಭಾರತ ಮೊದಲನೇ ಇನಿಂಗ್ಸ್ನಲ್ಲಿ 297 ರನ್ ದಾಖಲಿಸಿತ್ತು. ರವೀಂದ್ರ ಜಡೇಜಾ ಅವರು 58 ರನ್ ಗಳಿಸಿದ್ದಲ್ಲದೇ, ಇಶಾಂತ್ ಶರ್ಮಾ ಅವರ ಜತೆಗೂಡಿ 60 ರನ್ ಜತೆಯಾಟವಾಡಿದ್ದರು.  ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಎರಡನೇ ದಿನದಾಟ ಮುಕ್ತಾಯಕ್ಕೆ ಎಂಟು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. ಇಶಾಂತ್ ಶಮರ್ಾ ಐದು ವಿಕೆಟ್ ಗೊಂಚಲು ಪಡೆದಿದ್ದರು.