ಜೇಸನ್ ಗಿಲೆಪ್ಸಿಯ ಸಸ್ಸೆಕ್ಸ್ ಮುಖ್ಯ ಕೋಚ್ ಹುದ್ದೆ 2022ರವರೆಗೆ ವಿಸ್ತರಣೆ

ಲಂಡನ್. ಅ 10     ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಜೇಸನ್ ಗಿಲೆಪ್ಸಿ ಅವರ ಇಂಗ್ಲೆಂಡ್ ಕೌಂಟಿಯ ಸಸ್ಸೆಕ್ಸ್ ತಂಡದ ಮುಖ್ಯ ಕೋಚ್ ಹುದ್ದೆಯ ಗುತ್ತಿಗೆಯನ್ನು ಮುಂದಿನ 2022ರವರೆಗೂ ವಿಸ್ತರಣೆ ಮಾಡಲಾಗಿದೆ. ಸಸ್ಸೆಕ್ಸ್ ಕ್ಲಬ್ನ ಮುಖ್ಯ ಕೋಚ್ ಹುದ್ದೆಯ ಗುತ್ತಿಗೆ ಅವಧಿಯನ್ನು ವಿಸ್ತರಿಸಿರುವುದು ಹೆಚ್ಚು ಖುಷಿಂ ತಂದಿದೆ. ಇಲ್ಲಿನ ಸ್ಥಳ, ಕ್ಲಬ್, ಆಟಗಾರರು ಹಾಗೂ ಕೋಚ್ಗಳನ್ನು ತುಂಬಾ ಇಷ್ಟ ಪಡುತ್ತೇನೆ ಎಂದು ಗಿಲೆಪ್ಸಿ ಹೇಳಿರುವುದನ್ನು ಕ್ಲಬ್ ಪ್ರಕಟಿಸಿದೆ. ತಮ್ಮ ಹುದ್ದೆಯ ಗುತ್ತಿಗೆ ಅವಧಿ ವಿಸ್ತರಿಸಿರುವುದನ್ನು ಗೌರವಿಸುತ್ತೇನೆ. ಅದಕ್ಕೆ ತಕ್ಕಂತೆ ಕ್ಲಬ್ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಆಟಗಾರರು ಹಾಗೂ ಕೋಚ್ಗಳ ಸಹಕಾರದಿಂದ ಸಸ್ಸೆಕ್ಸ್ ಕ್ಲಬ್ ಹೊಂದಿರವ ಗುರಿಯನ್ನು ಮುಟ್ಟಲು ಪರಿಶ್ರಮ ಪಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. 2018ರ ಆವೃತ್ತಿಯಲ್ಲಿ ಗಿಲೆಪ್ಸಿ ಅವರು ಸಸ್ಸೆಕ್ಸ್ ಕ್ಲಬ್ನ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು. ಈ ಆವೃತ್ತಿಯಲ್ಲಿ ಎರಡು ಬಾರಿ ಸಸ್ಸೆಕ್ಸ್ ನಾಕೌಟ್ ಹಂತಕ್ಕೆ ತಲುಪಿತ್ತು. ಇದರಲ್ಲಿ ಒಮ್ಮೆ ಫೈನಲ್ಗೂ ಲಗ್ಗೆ ಇಟ್ಟಿತ್ತು.