ಕಿತ್ತೂರು ಉತ್ಸವದಲ್ಲಿ ಜನಮನ ಸೆಳೆದ ಜಂಗಿ ಕುಸ್ತಿ ಪಂದ್ಯಾವಳಿಗಳು

ಬೆಳಗಾವಿ : ಮೂರು ದಿನಗಳ ವರೆಗೆ ನಡೆದ  ಕಿತ್ತೂರು ಚೆನ್ನಮ್ಮ ಉತ್ಸವವು ಅದ್ದೂರಿಯಾಗಿ ಜರುಗುವ ಮೂಲಕ ವಿವಿಧ ಕ್ರೀಡೆಗಳಿಗೆ ಹಾಗೂ ಸಾಂಸ್ಕೃತಿಕ ರಸದೂಟದ ಕೇಂದ್ರವಾಗಿ ಪರಿಣಮಿಸಿತು. ಅದೇ ರೀತಿಯಾಗಿ ಶುಕ್ರವಾರ ಸಂಜೆ ನಡೆದ ಜಂಗಿ ಕುಸ್ತಿ ಪಂದ್ಯಾವಳಿಗಳು ಜನಮನಸೆಳೆದವು. 

     ಕಿತ್ತೂರು ಉತ್ಸವದ ಕೊನೆಯ ದಿನವಾದ ಶುಕ್ರವಾರ ಸಂಜೆ ಕಿತ್ತೂರು ಹೊರ ವಲಯದಲ್ಲಿ ನಡೆದ ದೇಶಿಯ ಕ್ರೀಡೆ ಜಂಗಿ ಕುಸ್ತಿ ಪಂದ್ಯಾವಳಿಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕುಸ್ತಿ ಪಟ್ಟುಗಳು ಭಾಗವಹಿಸಿದರು.