ಚೆನ್ನಮ್ಮ ಸ್ವಾರ್ಥಕ್ಕಾಗಿ ಹೋರಾಟ ಮಾಡದೆ ದೇಶಕ್ಕಾಗಿ ಪ್ರಾಣತ್ಯಾಗ‌ ಮಾಡಿದ ಧೀರೆ : ಸಿಎಂ ಸಿದ್ದರಾಮಯ್ಯ

ಬೆಳಗಾವಿ : ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅಮಟೂರು ಬಾಳಪ್ಪನವರು ತಮ್ಮ ಸ್ವಾರ್ಥಕ್ಕಾಗಿ ಹೋರಾಡಿಲ್ಲ. ಸಮಾಜ ಮತ್ತು ದೇಶಕ್ಕಾಗಿ ಬ್ರಿಟಿಷ್ ರ ವಿರುದ್ದ ಹೋರಾಟ ಮಾಡಿ, ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿದ್ದಾರೆ ಎನ್ನುವದನ್ನು ನಾವು ಎಂದಿಗೂ ಮರೆಯುವಂತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.

    ಕಿತ್ತೂರು ನಲ್ಲಿ ನಡೆದ ಕಿತ್ತೂರು ಉತ್ಸವ ಸಮಾರೋಪ ಸಮಾರಂಭ ಉದ್ದೇಶಿಸಿ‌ ಮಾತನಾಡಿದ ಅವರು, ಕಿತ್ತೂರು ವಿಜಯಕ್ಕೆ 200 ವರ್ಷ ತುಂಬಿವೆ. ಕಿತ್ತೂರು ಸಂಸ್ಥಾನ ಆಳಿದ ಚನ್ನಮ್ಮ ವೀರ ಮಹಿಳೆಯಾಗಿದ್ದಾರೆ. ಬ್ರಿಟಿಷ್ ರು ಮಾಡಿದ ಕಾನೂನು ವಿರೋಧಿಸಿ ಕಪ್ಪು ಕಾಣಿಕೆ ಕೊಡಲ್ಲೊ, ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನು ಧಿಕ್ಕರಿಸಿ ಬ್ರಿಟಿಷ್ ಎದುರು ಹಾಕಿಕೊಂಡು ಯುದ್ದ ಸಾರಿ ಜಯ ಪಡೆದವರು ಚನ್ನಮ್ಮ ಎನ್ನುವದು ಮರೆಯುವಂತಿಲ್ಲ ಎಂದರು.

   ಅದಕ್ಕೆ 200 ವರ್ಷ ಗತಿಸಿವೆ. ಚನ್ನಮ್ಮನ ಬಗ್ಗೆ ಅಪಾರ ವಾದ ಗೌರವ ನನಗೆ. ಈ ಬಾರಿ ಅರ್ಥಪೂರ್ಣ ವಾಗಿ ವಿಜಯೋತ್ಸವದ ಮಾಡಿದ್ದಾರೆ. ಸರಕಾರದ ವತಿಯಿಂದ ಕಿತ್ತೂರು ಆಚರಣೆ ಮಾಡಲು ಈ ಹಿಂದೆ ಸಿದ್ದರಾಮಯ್ಯ ಸರಕಾರ ಆದೇಶ ಮಾಡಿದೆ. ಯಾವ ಸರಕಾರ ಇದರ ಬಗ್ಗೆ ತಿರ್ಮಾಣ ಮಾಡಿರಲಿಲ್ಲ. ಇಂದಿನ ಪೀಳಿಗೆಗೆ ಚನ್ನಮ್ಮನ ಇತಿಹಾಸ ತಿಳಿಸಲು ಈ ಕಾರ್ಯ ಮಾಡಲಾಗುತ್ತಿದೆ ಎಂದರು. ಓರ್ವ ಹೆಣ್ಣುಮಗಳಾಗಿ ಬ್ರಿಟಿಷ್ ವಿರುದ್ಧ ಹೋರಾಡಿರುವದು ಸಾಧನೆಯೇ ಎಂದರು. 

   ಚೆನ್ನಮ್ಮ ತನ್ನ ಸಂಸ್ಥಾನ ಉಳಿಸಿಕೊಳ್ಳಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅನೇಕ ಮಹನೀಯರ ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಕಂದಾಚಾರ, ಮೌಢ್ಯಗಳನ್ನು ತಿರಸ್ಕರಿಸಬೇಕಾಗಿದೆ. ಎಲ್ಲ ಸಮಾಜ ಒಂದೆ ಭಾವನೆ ಎಂದಿರುವ ಬಸವಣ್ಣನವರು ಸಾಂಸ್ಕೃತಿಕ ನಾಯಕ ಎಂದು ನಾವು ಘೋಷಿಸಿದ್ದೇವೆ. ಸಮಾಜದಲ್ಲಿ ವಿಷಬೀಜ ಬಿತ್ತುವವರನ್ನು ನಾವು ತಿರಸ್ಕರಿಸಬೇಕು ಎಂದರು

   ಕೂಡಲಸಂಗಮದ ಬಸವ ಜಯಮೃತ್ಯುಂಜಯ ಶ್ರೀಗಳು‌ ಮಾತನಾಡಿ, ಚನ್ನಮ್ಮನ ಉತ್ಸವ ಕ ಸಿಎಂ ಬಂದಿರುವದು ವಿಶೇಷ ವಾಗಿದೆ. 200 ನೇ ಉತ್ಸವ ಕ್ಕೆ ಬಂದಿರುವದು ನಮ್ಮಲ್ಲರಿಗೆ ಸಂತಸ ತಂದಿದೆ. ನಂದಗಡ ಸಂಗೊಳ್ಳಿ ರಾಯಣ್ಣ ರೀತಿಯಲ್ಲಿ ಕಿತ್ತೂರು ಅಭಿವೃದ್ಧಿ ಮಾಡುವಂತೆ ಸಿಎಂ ಅವರಲ್ಲಿ ವಿನಂತಿ ಸಿದರು. ಕಿತ್ತೂರು ಉತ್ಸವ ಈ ಭಾಗದ ನಾಡಹಬ್ಬ ಘೋಷಣೆ ಮಾಡಲಿ ಎಂದು ಒತ್ತಾಯಿಸಿದರು. ಝಾನ್ಸಿ ರಾಣಿಯ ಸ್ಮಾರಕ ರಾಷ್ಟ್ರೀಯ ಕ್ಷೇತ್ರವಾಗಿದೆ. ಅದೇ ರೀತಿ ಕಿತ್ತೂರು ಚನ್ನಮ್ಮನ ಸ್ಮಾರಕ ರಾಷ್ಟ್ರೀಯ ಕೇಂದ್ರ ವಾಗಲಿ. ರಾಯಣ್ಣ, ಕಿತ್ತೂರು ಚನ್ನಮ್ಮನ ಖಡ್ಗವನ್ನು ತರು ಕೆಲಸವಾಗಲಿ ಎಂದರು ನುಡಿದರು. 

   ಸಚಿವ ಶಿವರಾಜ ತಂಗಡಗಿ ಮಾತನಾಡಿ, ಚೆನ್ನಮ್ಮನ ಇತಿಹಾಸ ಬಹಳ ದೊಡ್ಡದಾಗಿದೆ. ಹೆಣ್ಣುಮಕ್ಕಳು ಸಾಧನೆ ಮಾಡುತ್ತಾರೆ ಎಂದರೆ ಅದಕ್ಕೆ ಚೆನ್ನಮ್ಮ ಸಾಕ್ಷಿಯಾಗಿದ್ದಾರೆ. ಬಾಬಾಸಾಹೇಬರು ಜಿಗಟ ಬೆಲ್ಲ ಇದ್ದ ಹಾಗೆ ಅವರು ಅಭಿವೃದ್ಧಿ ಗಾಗಿ ಸದಾ ಕಾರ್ಯ ಮಾಡುತ್ತಿದ್ದಾರೆ. ಉತ್ಸವಗಳನ್ನು ಹಾಗೂ ಎಲ್ಲ ಸಮಾಜಕ್ಕೆ ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲರ ಅಭಿವೃದ್ಧಿಗೆ ಸಿಎಂ ಶ್ರಮಿಸುತ್ತಿದ್ದಾರೆ ಎಂದರು.

ಇದೇ ವೇಳೆ ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ, ದೇಶದಲ್ಲಿ ಮೊಟ್ಟಮೊದಲು ಬ್ರಿಟಿಷ್ ರ ವಿರುದ್ದ ಶಸ್ತ್ರಾಸ್ತ್ರ ಎತ್ತಿದ ಕೆಚ್ಚೆದೆಯ ವೀರೆ ಚನ್ನಮ್ಮ ಎನ್ನುವುದನ್ನು ನಾವು ಮರೆಯುವಂತಿಲ್ಲ ಎಂದರು. 

   ಪ್ರಾಸ್ತಾವಿಕವಾಗಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಹೊಂದಾಣಿಕೆ ಮಾಡಿಕೊಳ್ಳದೆ ಚೆನ್ನಮಾಜಿ ಬ್ರಿಟಿಷ್ ಜೊತೆ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ್ದಾರೆ. ಅದರ ಪ್ರಯುಕ್ತ ವಾಗಿ ಈ ಉತ್ಸವ ನಡೆಯುತ್ತದೆ. ರಾಯಣ್ಣ ಹಾಗೂ ಅಮಟೂರು ಬಾಳಾಪ್ಪ ಹೀಗೆ ಹಲವರು ಚನ್ನಮ್ಮನ ಹೋರಾಟ ಕ್ಕೆ ಸಾಥ ನೀಡಿದ್ದಾರೆ. 

   ಅದೇ ರೀತಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೆಲಸ ಕಾರ್ಯ ನಡೆಯುತ್ತಿವೆ. ಸಿಎಂ ಅದರ ಬಗ್ಗೆ ನೀರಾವರಿ ಕೆಲಸ ಹಂತ ಹಂತ ಮಾಡುವದಾಗಿ ಹೇಳಿದ್ದಾರೆ. ಪ್ರವಾಸಿ ತಾಣವಾಗುವ ಕಾರ್ಯ ನಡೆಯಬೇಕಿದೆ. ಹೊಸ ವೇದಿಕೆ ಕೂಡಾ ನೂತನ ನಿರ್ಮಾಣ ಆಗಬೇಕಿದೆ. ಏತ ನೀರಾವರಿ ಮೂಲಕ ಒಂದು ತಿಂಗಳಲ್ಲಿ ಕೆರೆ ತುಂಬುವ ಕಾರ್ಯ ಒಂದು ತಿಂಗಳಲ್ಲಿ ನಡೆಯಲಿವೆ.  ದುಸ್ತಿತಿಯಲ್ಲಿರುವ ಕಾರಖಾನೆ ಗೆ ಸಿಎಂ ಪುನ್ಸಚೇತನ ಮಾಡಲು ಆಸಕ್ತಿ ವಹಿಸುವಂತೆ ವಿನಂತಿಸಿದರು. ಬರುವ ಎರಡು ವರ್ಷಗಳ ಲ್ಲಿ ಕೋಟೆಯ ಚಿತ್ರಣ ಬದಲಾಗಲಿದೆ ಎಂದರು.

  ವೇದಿಕೆಯ ಮೇಲೆ ಕಲ್ಮಟದ ಮಡಿವಾಳ  ರಾಜಯೋಗಿಂದ್ರ ಶ್ರೀ, ಕೂಡಲ ಸಂಗಮ ಜಯಮೃತ್ಯುಂಜಯ ಶ್ರೀಗಳು, ನಿಚ್ವನಿಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಶ್ರೀಗಳು ಸಚಿವರಾದ ಶಿವರಾಜ ತಂಗಡಗಿ, ಶಾಸಕರಾದ ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ, ಬಾಬಾಸಾಹೇಬ ಪಾಟೀಲ, ಹನುಮಂತ ನಿರಾಣಿ, ವಿಶ್ವಾಸ ವೈದ್ಯ, ಅಶೋಕ ಪಟ್ಟಣ, ರಾಜು ಸೇಠ್, ಪುರುಷೋತ್ತಮ ಬಿಳಿಮಲೆ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಐಜಿಪಿ ವಿಕಾಸಕುಮಾರ್, ಡಿಸಿ ಮೊಹಮ್ಮದ್ ರೋಶನ್, ಎಸ್ ಪಿ ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶೀಂಧೆ ಇವರುಗಳು ಉಪಸ್ಥಿತರಿದ್ದರು. ಪ್ರಭಾವತಿ ಫಕೀರಪೂರ ಸ್ವಾಗತಿದರು.