ಜನಪರ ಜನಸ್ನೇಹಿ ಪೊಲೀಸ್ ಕಾರ್ಯಕ್ರಮ

ಲೋಕದರ್ಶನವರದಿ

ಶಿಗ್ಗಾವಿ30: ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ದೇಶದ ಏಕತೆ ಹಾಗೂ ಹೋರಾಟಕ್ಕಾಗಿ ಜನಶಕ್ತಿ ಸಂಘಟಿಸಲು ಸಾರ್ವಜನಿಕ ಗಣಪತಿ ಪ್ರತಿಷ್ಠಾಪನಾ ಸಂಪ್ರದಾಯಿಕ ವ್ಯವಸ್ಥೆ ನಾಡಿನೆಲ್ಲೆಡೆ ಬೆಳೆದು ಬಂದಿದ್ದು. ಪಾರಂಪರಿಕ ಸಂಸ್ಕೃತಿಯನ್ನು ವಿಕೃತಿಗೊಳಿಸದೇ ಶಾಂತರೀತಿಯಲ್ಲಿ ಸಾಂಪ್ರದಾಯಿಕ ಹಬ್ಬ ಆಚರಿಸುವಂತೆ ಪಟ್ಟಣದ ವಿರಕ್ತಮಠದ ಸಂಗನಬಸವಶ್ರೀಗಳು  ಭಾಗವಹಿಸಿ ಜನತೆಗೆ ಕರೆ ನೀಡಿದರು. 

 ವಿರಕ್ತಮಠದ ಸಭಾಭವನದಲ್ಲಿ ಪೊಲೀಸ್ ಉಪವಿಭಾಗ ಆಯೋಜಿಸಿದ್ದ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಜನಪರ ಜನಸ್ನೇಹಿ ಪೊಲೀಸ್ ಕಾರ್ಯಕ್ರಮದಲ್ಲಿ  ಅವರು ಮಾತನಾಡಿ ವಿಘ್ನನಿವಾರಕ ಗಣೇಶ ಸ್ಥಾಪನೆಯಿಂದ ನಾಡಿನ ಜನರಿಗೆ ಒಳ್ಳೇಯದಾಗಬೇಕು, ಪರಿಸರ ಕಾಳಜಿ ತೋರಬೇಕು. ಸಾರ್ವಜನಿಕ ಹಿತಾಸಕ್ತಿಗೆ ವ್ಯತಿರಿಕ್ತವಾಗಿ ಆಚರಣೆ ಅಡಚಣೆಯಾಗಬಾರದು. ಸಾಂಪ್ರದಾಯಿಕವಾಗಿ ಭಕ್ತಿಭಾವದಿಂದ ಭಜನೆ ಸಾಂಪ್ರದಾಯಿಕ ಭಕ್ತಿ ಹಾಡುಗಳನ್ನು ಕಲಾವಿದರ ತಂಡದ ಮೂಲಕ ಬಳಕೆ ಮಾಡಿಕೊಂಡು ಪರಿಶುದ್ಧತೆಯಿಂದ ಆಚರಿಸುವಂತೆ ಪಟ್ಟಣದ ಜನತೆಗೆ ಕರೆ ನೀಡಿದರು.

  ಶಿಗ್ಗಾವಿ ಡಿ.ವಾಯ್.ಎಸ್ಪಿ  ಓ.ಬಿ. ಕಲ್ಲೇಶಪ್ಪ ಮಾತನಾಡಿ ಸಾಂಪ್ರದಾಯಿ ಹಬ್ಬ ಆಚರಣೆಗೆ ಜಿಲ್ಲಾಢಳಿತ ವಿಧಿಸಿದ ಮಾನದಂಡಗಳನ್ನು ಎಲ್ಲ ಸಂಘಟಕರು ಪಾಲಿಸಬೇಕು. ಗಣೇಶ ಪ್ರತಿಷ್ಠಾಪಿಸುವ ಸಮೀತಿ ಸದಸ್ಯರು ಪೂರ್ವಭಾವಿಯಾಗಿ ವಿದ್ಯುತ್ ಸಂಪರ್ಕ, ಜಾಗೆಯ ಮಾಲಿಕರ ಅನುಮತಿ ಅಥವಾ ಒಪ್ಪಿಗೆ ಪತ್ರ. ಪುರಸಭೆಯ ಹಾಗೂ ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯ ಪಡೆದು ಪೆಂಡಾಲ ನಿಮರ್ಿಸಿಕೊಳ್ಳಬೇಕು. ಅಲ್ಲದೇ ಕೆಲವು ಭಾಗದಲ್ಲಿ ರಸ್ತೆಯ ಮೇಲೆ ಪೆಂಡಾಲ ನಿಮರ್ಿಸುವುದರಿಂದ ಸಾರ್ವಜನಿಕರ ವಾಹನ, ಸಂಚಾರ  ಹಾಗೂ ಓಡಾಟಕ್ಕೆ ಅಡಚನೆಯಾಗುತ್ತದೆ.  ಮೈಕ್ ಬಳಕೆಯಿಂದ ಹಬ್ಬ ಆಚರಣೆ ಇತರರಿಗೆ ಕಿರಿಕಿರಿಯಾಗಬಾರದು. ಇತರ ಧಮರ್ಿಯರಿಗೂ ತೊಂದರೆಯಾಗದಂತೆ ಸಾಂಪ್ರದಾಯಿಕವಾಗಿ ಶಾಂತರೀತಿಯಿಂದ ಏಕತೆಯ ಹಬ್ಬ ಆಚರಿಸುವಂತೆ ಕರೆ ನೀಡಿ. ಇಲಾಖೆಗಳು ನೀಡಿದ ಯಾವೂದೇ ಮುಂಜಾಗೃತೆಯ ಕ್ರಮ ಅನುಸರಿಸದೇ ಹೋದರೇ ಸಂಘಟಕರ ವಿರುದ್ದ ಕ್ರಮ ನಿಶ್ಚಿತ ಎಂದ ಅವರು ಸಾರ್ವಜನಿಕ ಶಾಂತಿಭಂಗ ಮಾಡಿದರೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

  ವೃತ್ತ ನಿರೀಕ್ಷಕ ಚಿದಾನಂದ. ಎಸ್.ವಿ ಪೊಲೀಸ್ಗೌಡ್ರ. ಏ.ಎಸ್ಐ ಹಿರೇಮಠ. ಹಳ್ಳಿಯವರ. ಕಾನ್ಸಟೇಬಲ್ ಸಂತೋಷ ಕೂಸಗೂರು. ಕಣವಿ. ನಿಂಗಪ್ಪ. ಅಗ್ನಿಶಾಮಕದಳದ ಅಧಿಕಾರಿ ಗಣೇಶಗೌಡ.  ಅಲ್ಲದೇ ಹೆಸ್ಕಾಂ ರಮೇಶ ಪುರಸಭೆಯ ಆರೋಗ್ಯ ಅಧಿಕಾರಿ ಶ್ರುತಿ ವಾಲಿಕಾರ, ಹಾಗೂ ನೂರಾರು ಸಾರ್ವಜನಕರು ಪಾಲ್ಗೊಂಡಿದ್ದರು.