ಬೆಂಗಳೂರು, ಜ.17: ರಾಷ್ಟ್ರೀಯ ಏರೋ ಒಲಂಪಿಕ್ಸ್ ಸ್ಪರ್ಧೆಯನ್ನು ಜ.19 ರಿಂದ 21ರ ವರೆಗೆ ಸುರಂಜನ್ ದಾಸ್ ರಸ್ತೆಯ ಎಚ್ ಎ ಎಲ್ ಮ್ಯಾನೇಜ್ಮೆಂಟ್ ಅಕಾಡೆಮಿಯಲ್ಲಿ ಆಯೋಜಿಸಲಾಗಿದೆ ಎಂದು ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆ ಮುಖ್ಯಸ್ಥ ಕಲೈವನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಎಚ್.ಎ.ಎಲ್ ನ ಸಿಇಒ ಜಿ.ಎಸ್.ಭಾಸ್ಕರ್ ಆಗಮಿಸಲಿದ್ದು, ಗೌರವ ಅತಿಥಿಯಾಗಿ ಎಚ್ ಎ ಎಲ್, ಎಫ್.ಎಂ.ಡಿಯ ಕಾರ್ಯಕಾರಿ ನಿದರ್ೆಶಕ ವೆಂಕಟೇಶ್ವರ ರಾವ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಷ್ಟ್ರಾದ್ಯಂತ ಎಸ್ಎಸ್ಎಲ್ ಸಿ ಪಿಯುಸಿ ಪೂರ್ಣಗೊಳಿಸಿದ ವಿದ್ಯಾಥರ್ಿಗಳಿಗೆ ಅಂತರಿಕ್ಷ ಯಾನ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಿ ಮುಂದಿನ ವೃತ್ತಿ ಜೀವನದಲ್ಲಿ ಏರೋ ಸ್ಪೇಸ್ ವಲಯದತ್ತ ಆಕಷರ್ಿತರಾಗಲು ಪ್ರೇರೇಪಣೆ ನೂಡುವುದು ಇದರ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಪ್ರತಿ ವರ್ಷ ವಿಮಾನದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ವಿಮಾನಗಳ ಸಂಖ್ಯೆ ವೃದ್ದಿಸುತ್ತಿವೆ. ಈ ನಿಟ್ಟಿನಲ್ಲಿ ಯುವಜನತೆಗೆ ವಾಯುಯಾನ ಕ್ಷೇತ್ರದ ಬಗ್ಗೆ ಅರಿವು ಮೂಡಿಸಿ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದರು.
ಆಂತರಿಕ್ಷಯಾನ ತಂತ್ರಜ್ಞಾನದಲ್ಲಿ ಇತ್ತೀಚಿನ ಪ್ರಗತಿಯನ್ನು ಪರಿಚಯಿಸುವುದಕ್ಕಾಗಿ ಇಸ್ರೋ, ಎನ್ ಎ ಎಲ್, ಡಿಆರ್ ಡಿಒ ಮುಂತಾದ ಇಲಾಖೆಗಳ ವಿಜ್ಞಾನಿಗಳಿಂದ ತಾಂತ್ರಿಕ ಗೋಷ್ಠಿ ಆಯೋಜಿಸಲಾಗಿದೆ. ಜ.22 ರಂದು ನಡೆಯುವ ಸಾಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಎ.ಇ.ಎಸ್.ಐ ಅಧ್ಯಕ್ಷ ಡಾ.ಆರ್.ಕೆ.ತ್ಯಾಗಿ ಆಗಮಿಸಲಿದ್ದು, ಗೌರವ ಅತಿಥಿಯಾಗಿ ಎಚ್.ಎ.ಎಲ್ ನಿದರ್ೆಶಕ ಅಲೋಕ್ ವರ್ಮ ಹಾಗೂ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸ್ಪಧರ್ೆಗಳು ಪ್ರಥಮ ಹಂತದ ವರದಿ 30 ಅಂಕ, ದ್ವಿತೀಯ ಹಂತದ ವರದಿ 20 ಅಂಕ, ತಾಂತ್ರಿಕ ಮತ್ತು ಸಾಮಾನ್ಯ ಜ್ಞಾನದ ಪ್ರಶ್ನೋತ್ತರ 30 ಅಂಕ, ಸ್ಥಿರ ಮಾದರಿ ತಯಾರಿಕೆ 20 ಅಂಕಗಳಿಗೆ ನಡೆಯಲಿದ್ದು ಇದಕ್ಕೆ ಬೇಕಾದ ಎಲ್ಲಾ ಅಗತ್ಯ ಮೂಲ ವಸ್ತುಗಳನ್ನು ನೀಡಲಾಗುವುದು ಎಂದು ಅವರು ವಿವರಿಸಿದರು.