ಬೆಂಗಳೂರು,ಜ.9 ಕೂಡಲ ಸಂಗಮದಲ್ಲಿ ಲಿಂಗಾಯತ ಧರ್ಮ ಸ್ಥಾಪನಾ ದಿನದ ಅಂಗವಾಗಿ ಜ.11ರಿಂದ 14 ರ ವರೆಗೆ 33ನೇ ಶರಣ ಮೇಳ ಆಯೋಜಿಸಲಾಗಿದೆ ಎಂದು ಜಗದ್ಗುರು ಬಸವ ಕುಮಾರ ಸ್ವಾಮೀಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.11 ರಂದು ಶರಣ ಮೇಳದ ಅಂಗವಾಗಿ ಚಿಂತನಾ ಗೋಷ್ಠಿ ನಡೆಯಲಿದ್ದು, ಶ್ರೀ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಗೋಷ್ಠಿ ಉದ್ಘಾಟಿಸಲಿದ್ದಾರೆ. ಶ್ರೀ ವಚನ ಸಾಹಿತ್ಯದ ಬಹುಮುಖಿ ಚಿಂತನೆ ಕುರಿತು ಅನೇಕ ಶರಣರು ಮಾತನಾಡಲಿದ್ದಾರೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಬಸವ ದಳದ 33ನೇ ಅಧಿವೇಶನವನ್ನು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಶಿವಶರಣ ಎಂ.ಬಿ.ಪಾಟಿಲ್, ಸಚಿವ ಸಿ.ಟಿ ರವಿ, ಶಾಸಕ ಆನಂದ್ ನ್ಯಾಮೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಸವ ಧರ್ಮ ಪೀಠದಿಂದ ಶರಣ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಅದೇ ದಿನ ಸಂಜೆ ನಡೆಯಲಿರುವ ರೈತ ಸಮಾವೇಶವನ್ನು ಸಂಸದ ಪಿ.ಸಿ ಗದ್ದೀಗೌಡರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೋಡಿ ಹಳ್ಳಿ ಚಂದ್ರಶೇಖರ್, ಶರಣರಾದ ಕುರುಬೂರು ಶಾಂತಕುಮಾರ್, ವೀರೇಶ್ ಸೊಬರದ ಮಠ ಪಾಲ್ಗೊಳ್ಳಲಿದ್ದಾರೆ ಎಂದರು.