ಜಮ್ಮು-ಕಾಶ್ಮೀರ ಮೂವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು-ಕಾಶ್ಮೀರದ ಮುಜ್ಗುಂದ್ ನಲ್ಲಿ ಉಗ್ರರ ವಿರುದ್ಧದ ತಡರಾತ್ರಿಯಿಂದ ನಡೆದ ಭದ್ರತಾಪಡೆಗಳ ಎನ್ಕೌಂಟರ್ಗೆ ಮೂವರು ಉಗ್ರರು ಬಲಿಯಾಗಿದ್ದಾರೆ. 

ಶ್ರೀನಗರದ ಹೊರವಲಯದಲ್ಲಿ ಕಳೆದ 17ಗಂಟೆಗಳಿಂದಲೂ ನಡೆಯುತ್ತಿರುವ ಕಾಯರ್ಾಚರಣೆಯಲ್ಲಿ ಮೂವರು ಉಗ್ರರನ್ನು ಭದ್ರತಾಪಡೆಗಳು ಸದೆಬಡಿದಿವೆ. ಕಾಯರ್ಾಚರಣೆ ವೇಳೆ ಓರ್ವ ಯೋಧನಿಗೆ ಗಾಯಗಳಾಗಿವೆ. 

ಶನಿವಾರ ಸಂಜೆ ಮುಜ್ಗುಂದ್ ಗ್ರಾಮದಲ್ಲಿ ಉಗ್ರರು ಅಡಗಿರುವ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯ ಆರಂಭಿಸಿದ ಭದ್ರತಾ ಪಡೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಎನ್ ಕೌಂಟರ್ ನಡೆದ ಸ್ಥಳದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಉಗ್ರರ ಗುತರ್ಿಕೆ ಕುರಿತು ತನಿಖೆ ನಡೆಸಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  

ಭದ್ರತಾಪಡೆಗಳಿಂದ ತಪ್ಪಿಸಿಕೊಳ್ಳಲು ಉಗ್ರರು ತಾವು ಅಡಗಿಕೊಂಡಿರುವ ಮನೆಯಿಂದ ಬೇರೊಂದು ಮನೆಗೆ ಸ್ಥಳ ಬದಲಾಯಿಸುತ್ತಲೇ ಇದ್ದಾರೆ. ಕಾಯರ್ಾಚರಣೆ ಇನ್ನೂ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇನ್ನು ಶ್ರೀನಗರ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮವಾಗಿ ಅಂತಜರ್ಾಲ ಸೇವೆಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.