ಲೂಕಿ ಫರ್ಗೂಸನ್‌ ಸ್ಥಾನಕ್ಕೆ ಜ್ಯಾಮಿಸನ್‌ ಫರ್ಗೂಸನ್‌ ಆಯ್ಕೆ

ವೆಲ್ಲಿಂಗ್ಟನ್‌, ಡಿ 17 ಗಾಯಾಳು ಲೂಕಿ ಫರ್ಗೂಸನ್ ಅವರ ಸ್ಥಾನಕ್ಕೆ  ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಇನ್ನುಳಿದ ಎರಡು ಪಂದ್ಯಗಳಿಗೆ ಜ್ಯಾಮಿಸನ್‌ ಫರ್ಗೂಸನ್‌ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಪಂದ್ಯದಲ್ಲಿ ಲೂಕಿ ಫರ್ಗೂಸನ್‌ ಅವರು ಗಾಯಕ್ಕೆ ಒಳಗಾಗಿದ್ದರು. ಅವರು ಕೇವಲ 11 ಓವರ್‌ ಮಾತ್ರ ಬೌಲಿಂಗ್ ಮಾಡಿದ್ದರು. ಈ ಪಂದ್ಯದಲ್ಲಿ ಆತಿಥೇಯರು 296 ರನ್‌ಗಳಿಂದ ಜಯ ಸಾಧಿಸಿದ್ದರು. ಲೂಕಿ ಫರ್ಗೂಸನ್ ಅವರಿಗೆ ಇನ್ನೂ ಆರು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಲಾಗಿದೆ.ಮುಖ್ಯ ಕೋಚ್‌ ಗ್ಯಾರಿ ಸ್ಟಡ್‌ ಅವರು ಮೆಲ್ಬೋರ್ನ್‌ ಬಾಕ್ಸಿಂಗ್‌ ಡೇ ಟೆಸ್ಟ್‌ ಗೆ 24ರ ಪ್ರಾಯದ ಜ್ಯಾಮಿಸನ್‌ ಅವರ ಸೇರ್ಪಡೆಯಾಗುತ್ತಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.ಜ್ಯಾಮಿಸನ್ ಅವರು ಪ್ಲಂಕೆಟ್‌ ಶೀಲ್ಡ್ ಟೂರ್ನಿಯಲ್ಲಿ 72 ವಿಕೆಟ್‌ ಕಬಳಿಸಿದ್ದಾರೆ. 2014ರ  19 ವಯೋಮಿತಿ ವಿಶ್ವಕಪ್‌ ಟೂರ್ನಿಯ ನ್ಯೂಜಿಲೆಂಡ್ ತಂಡದ ಸದಸ್ಯರಾಗಿದ್ದರು.''ದೇಶೀಯ ಪ್ಲಕೆಂಟ್ ನಾಲ್ಕು ದಿನಗಳ ಮಾದರಿಯ ಟೂರ್ನಿಯಲ್ಲಿ ಜ್ಯಾಮಿಸನ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸ್ಥಾನ ನೀಡಿದ್ದೇವೆ. ಅವರು ಎತ್ತರದ ವೇಗಿಯಾಗಿದ್ದು, ಇತರೆ ಬೌಲರ್‌ಗಳಿಗಿಂತ ಇನ್ನಷ್ಟು ಬೌನ್ಸ್ ಮಾಡಲಿದ್ದಾರೆ," ಎಂದು ಮುಖ್ಯ ಕೋಚ್‌ ಸ್ಟಡ್ ತಿಳಿಸಿದ್ದಾರೆ.ಮೆಲ್ಬೋರ್ನ್‌ ಎಂ.ಸಿ.ಜಿ ಕ್ರೀಡಾಂಗಣದಲ್ಲಿ ನಡೆಯುವ ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಸರಣಿ ಸಮಬಲ ಮಾಡಿಕೊಳ್ಳಲು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.