20ರಿಂದ ಜಂಬಗಿ ಸದಾಶಿವ ಮಹಾರಾಜರ ಜಾತ್ರೆ

Jambagi Sadashiva Maharaj's fair from 20th

ಸಂಬರಗಿ 15: ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಇರುವ ಜಂಬಗಿ ಗ್ರಾಮದಲ್ಲಿ ಸದಾಶಿವ ಮಹಾರಾಜ ಜಾತ್ರಾ ಮಹೋತ್ಸವ ದಿ. 20ರಿಂದ ನಡೆಯಲಿದೆ ಎಂದು ಜಾತ್ರಾ ಕಮಿಟಿಯವರು ತಿಳಿಸಿದ್ದಾರೆ.  

ಏಪ್ರೀಲ್ 20ರಂದು ಜಾತ್ರೆ ಪ್ರಾರಂಭವಾಗುತ್ತದೆ. 21ರಂದು ಸೋಮವಾರ ಬೆಳಿಗ್ಗೆ ಕೃಷ್ಣಾ ನದಿಯಿಂದ ನೀರು ತಂದು ವಿಶೇಷ ಪೂಜೆ, ಮಹಾನೈವೇದ್ಯ ನೆರವೇರುವುದು. ರಾತ್ರಿ ಓಂಕಾರಯ್ಯಾ ಮಹಾಸ್ವಾಮಿಜಿ ಇವರಿಂದ ಪ್ರವಚನ ನಡೆಯುವುದು. 22ರಂದು ಹ.ಬ.ಪ.ಅಮೂಲ ಮಹಾರಾಜ ಸರಕಾಟೆ ಇವರಿಂದ ಪ್ರವಚನ ಮತ್ತು ಕೀರ್ತನೆ ನಡೆಯುವುದು, ಒಂಟೆ ಕುದುರೆ ಗಾಡಿ, ನಾಯಿ ಶರ್ಯತ್ತು, ಸೈಕಲ್ ಶರ್ಯತ್ತು, ನಡೆಯುವುದು. 23ರಂದು ಆಕ್ರೇಸ್ಟಾ, 24ರಂದು ರಸಮಂಜರಿ ಕಾರ್ಯಕ್ರಮ ನಡೆಯುವುದು.  

ಬರುವ ಭಕ್ತರಿಗೆ ಅಥಣಿ-ಕವಟೆಮಹಾಂಕಾಳ-ಮೀರಜ ಘಟಕದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಲಾಗಿದೆ.