ನವದೆಹಲಿ, ಏ 10, ಜಲಿಯನ್ ವಾಲಾ ಬಾಗ್ ಸ್ಮಾರಕ ಜೂನ್ 15ರವರೆಗೆ ಪ್ರವಾಸಿಗರಿಗೆ ಸ್ಥಗಿತಗೊಳ್ಳಲಿದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಚಿವಾಲಯ, ಸ್ಮಾರಕ ನವೀಕರಣ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಜೂನ್ 15ರವರೆಗೆ ಅದನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ. ದೇಶ 2019ರ ಏ. 13ರಿಂದ 2020ರ ಏ.13ರವರೆಗೆ ಜಲಿಯನ್ ವಾಲಾ ಭಾಗ್ ಘಟನೆಯ ಶತಮಾನೋತ್ಸವ ಆಚರಿಸುತ್ತಿದೆ. ಸದ್ಯ ಸ್ಮಾರಕವನ್ನು ನವೀಕರಿಸಿ, ಅದರ ವಸ್ತುಸಂಗ್ರಹಾಲಯಗಳು, ಗ್ಯಾಲರಿಗಳು, ಧ್ವನಿ ಮತ್ತು ಬೆಳಕಿನ ಪ್ರಸಾರಕ್ಕೆ ಹೊಸ ರೂಪ ನೀಡಲಾಗುತ್ತಿತ್ತು. ಸ್ಮಾರಕದ ನವೀಕರಣಕೆಸಲ ಮಾರ್ಚ್ ನಲ್ಲಿಯೇ ಮುಗಿದು, ಏ. 13ರಂದು ಘಟನೆಯಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕಿತ್ತು. ಆದರೆ, ಲಾಕ್ ಡೌನ್ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಆದ್ದರಿಂದ 2020ರ ಜೂನ್ 15ರವರೆಗೆ ಸ್ಮಾರಕವನ್ನು ಪ್ರವಾಸಿಗರಿಗೆ ಮಚ್ಚಲು ನಿರ್ಧರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.