ನವದೆಹಲಿ, ಆ 16 ಭಾರತ ಹಾಗೂ ಅಮೆರಿಕದ ನಡುವಿನ ದ್ವಿಪಕ್ಷೀಯ ಪಾಲುದಾರಿಕೆ ಬಲಗೊಳಿಸಲು ಶುಕ್ರವಾರ ಉಭಯ ರಾಷ್ಟ್ರಗಳ ಪ್ರತಿನಿಧಿಗಳು ಮಾತುಕತೆ ನಡೆಸಿದರು.
ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಡಾ. ಎಸ್. ಜೈಶಂಕರ್ ಅವರು ದೇಶಕ್ಕೆ ಭೇಟಿ ನೀಡಿರುವ ಅಮೆರಿಕದ ವಿದೇಶಾಂಗ ಇಲಾಖೆ ಉಪಕಾರ್ಯದರ್ಶಿ ಜಾನ್ ಸುಲಿವನ್ ಅವರನ್ನು ಭೇಟಿಯಾದರು.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಉಪಕಾರ್ಯದರ್ಶಿ ಜಾನ್ ಸುಲಿಯನ್ ಅವರನ್ನು ಸ್ವಾಗತಿಸಲು ಸಂತಸವಾಗುತ್ತಿದೆ. ಅವರೊಂದಿಗೆ ಉಭಯ ರಾಷ್ಟ್ರಗಳ ಸಂಬಂಧ ಬಲಗೊಳಿಸುವ ಗಂಭೀರ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದಿದ್ದಾರೆ.
ಆ.14ರಂದು ಭಾರತದಲ್ಲಿನ ಅಮೆರಿಕದ ಪ್ರತಿನಿಧಿ ಕೆನ್ ಜ್ಯೂಸ್ಟರ್ ಅವರು 'ಭಾರತ-ಅಮೆರಿಕ ನಡುವಿನ ಸಂಬಂಧ ವೃದ್ಧಿಗೆ ಸಾಕಷ್ಟು ಶ್ರಮ ಪಟ್ಟಿರುವ ಉಪ ಕಾರ್ಯದರ್ಶಿ ಜಾನ್ ಸುಲಿಯನ್ ಅವರು ಭಾರತಕ್ಕೆ ಆಗಮಿಸಲಿದ್ದಾರೆ' ಎಂದು ಟ್ವೀಟ್ ಮಾಡಿದ್ದರು.
ಅವರು ತಮ್ಮ ಟ್ವೀಟ್ ನಲ್ಲಿ 'ಒಂದು ತಂಡ ಒಂದು ಯೋಜನೆ' ಹಾಗೂ 'ಅಮೆರಿಕ ಭಾರತ ದೋಸ್ತಿ' ಎಂಬ ಹ್ಯಾಷ್ ಟ್ಯಾಗ್ ಗಳನ್ನು ಬಳಸಿದ್ದರು.