ಜೈನ ಧರ್ಮವು ಪ್ರಾಚೀನ ಭಾರತೀಯ ಧರ್ಮವಾಗಿದೆ : 108 ಪುಣ್ಯ ಸಾಗರ ಮುಣಿ ಮಹಾರಾಜ
ಶಿಗ್ಗಾವಿ 20: ಜೈನ ಧರ್ಮವು ತನ್ನ ವಿಶಿಷ್ಟ ಆಚಾರಗಳು ಮತ್ತು ಸಂಪ್ರದಾಯಗಳಿಗೆ ಪ್ರಸಿದ್ಧವಾಗಿದೆ ಇದೊಂದು ಪ್ರಾಚೀನ ಭಾರತೀಯ ಧರ್ಮವಾಗಿದೆ ಎಂದು ಪೂಜ್ಯ ಆಚಾರ್ಯ 108 ಪುಣ್ಯ ಸಾಗರ ಮುಣಿ ಮಹಾರಾಜರು ಹೇಳಿದರು. ತಾಲೂಕಿನ ಮಡ್ಲಿ ಗ್ರಾಮದಲ್ಲಿ ನಡೆದ ಭಗವಾನ ಶ್ರೀ 1008 ಆಧಿನಾಥ ತೀಥಂರ್ಕರರ ಜಿನ ಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ ಜಗತ್ತಿಗೆ ಜೈನ ಸಮಾಜ ಮಾದರಿ ಎಂದರು.ಪೂಜ್ಯ ಸ್ವಸ್ತಿ ಆಕಳಾಂಕ ಕೇಸರಿ ಅಕಲಂಕ ಪಟ್ಟಾಧಿಕಾರಿ ಪಟ್ಟಾಚಾರ್ಯ ಭಟ್ಟಾರಕರು ಸೊಂದಾ ಮಾತನಾಡಿ ಜೈನ ಸಮಾಜವು, ಭಾರತದಲ್ಲಿ ಆವೃತ್ತಿಯು ತುಂಬಾ ಕಡಿಮೆ ಆದರೆ ಧರ್ಮ, ಸಾಂಸ್ಕೃತಿಕ, ಆರ್ಥಿಕ ಮತ್ತು ದಾನ-ಧರ್ಮ ಕಾರ್ಯಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಪಾತ್ರವಹಿಸಿದ್ದು, ಈ ಧರ್ಮದ ಆಚಾರ ವಿಚಾರಗಳಿಂದ ದೇಶದಲ್ಲಿ ಶಾಂತಿ ನೆಲೆವೂರಲು ಕಾರಣವಾಗಿದೆ ಎಂದರು.ಈ ಸಂದರ್ಭದಲ್ಲಿ ಷ ಬ್ರ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಬ್ಬಿಣ ಕಂತಿಮಠ ರಟ್ಟಿಹಳ್ಳಿ ದಿವ್ಯ ಸಾನಿಧ್ಯ ವಹಿಸಿದ್ದರು,ಗ್ರಾಮ ಪಂಚಾಯತಿ ಅಧ್ಯಕ್ಷ ಬಸಮ್ಮ ಗುಳೇದ, ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಎಪಿಎಂಸಿ ಅಧ್ಯಕ್ಷ ಹನುಮರಡ್ಡಿ ನಡುವಿನಮನಿ, ಚಂದ್ರಣ್ಣ ನಡುವಿನಮನಿ ಗ್ರಾಮದ ಜೈನ ಸಮಾಜದ ಅಧ್ಯಕ್ಷ ಮುರಿಗೆಪ್ಪ ದೇಸಾಯಿ, ಈಶ್ವರಗೌಡಪಾಟೀಲ್, ಯಲ್ಲಪ್ಪ ತಗಡಿನಮನಿ, ಬಾಹುಬಲಿ ಅಕ್ಕಿ, ಬಸವರಾಜ ಲಂಗೋಟಿ, ಅಭಿನಂದನ ಅವರಾದಿ, ಬಸವರಾಜ ಮಾಯಣ್ಣವರ ಸಮಾಜದ ಮುಖಂಡರು ಇದ್ದರು.