ಶೇಡಬಾಳ 25: ಪ್ರತಿಯೊಬ್ಬ ಶಿಕ್ಷಕರು ಜೀವನದಲ್ಲಿ ದಿ. ಮಿಜರ್ಿ ಅಣ್ಣಾರಾಯರ ತತ್ವಾದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಶಿಕ್ಷಕರಾಗಿ ಹೊರ ಹೊಮ್ಮಲು ಸಾಧ್ಯವೆಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನಾಡೊಜ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ಶೇಡಬಾಳ ಪಟ್ಟಣದ ಶಾಂತಿಸಾಗರ ಆಶ್ರಮದಲ್ಲಿ ಜರುಗಿದ ಅಖಿಲ ಕನರ್ಾಟಕ ಜೈನ ಶಿಕ್ಷಕರ ವೇದಿಕೆಯ ದಶಮಾನೋತ್ಸವ ಸಮಾರಂಭದ ಅಂಗವಾಗಿ ಏರ್ಪಡಿಸಲಾಗಿದ್ದ ಮಿಜರ್ಿ ಅಣ್ಣಾರಾಯ ಆದರ್ಶ ಶಿಕ್ಷಕ ಹಾಗೂ ಜ್ಞಾನಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕನರ್ಾಟಕ ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಮಿಜರ್ಿ ಅಣ್ಣಾರಾಯರು ಒಬ್ಬರಾಗಿದ್ದಾರೆಂದು ಬಣ್ಣಿಸಿದರು. ಪ್ರಾಥಮಿಕ ಶಾಲೆಯ ಸಾಮಾನ್ಯ ಶಿಕ್ಷಕನೊರ್ವ ಸಾಹಿತಿಯಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗುವುದೆಂದರೆ ಸಾಮಾನ್ಯ ವಿಷಯವಲ್ಲ. ಪ್ರತಿಯೊಬ್ಬ ಶಿಕ್ಷಕರು ಮಿಜರ್ಿ ಅಣ್ಣಾರಾಯರಂತೆ ಹೆಸರು ವಾಸಿಗಳಾಗುವಂತೆ ಶುಭ ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅನೇಕ ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ನೀಡುತ್ತಿರುವ 8 ರಿಂದ 10 ಸಾವಿರ ರೂ. ಗೌರವ ಧನ ಯಾವುದಕ್ಕೂ ಸಾಲದು. ಸಕರ್ಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಸಿಪಾಯಿಗಳು 15 ರಿಂದ 20 ಸಾವಿರ ರೂ. ವರೆಗೆ ಸಂಬಳ ಪಡೆಯುತ್ತಿರುವುದು ನಾವು ಕಾಣಬಹುದಾಗಿದೆ. ಆದರೆ ರಾಜ್ಯ ಸಕರ್ಾರ ಮಾತ್ರ ಅತಿಥಿ ಶಿಕ್ಷಕರಿಗೆ ಕಡಿಮೆ ವೇತನ ನೀಡಿ ಅವರನ್ನು ಅವಮಾನಿಸುತ್ತಿದೆ ಎಂದು ಹೇಳಿದರು. ಇನ್ನು ಮುಂದಾದರೂ ಮಾನ್ಯ ಶಿಕ್ಷಣ ಸಚಿವರು ಅತಿಥಿ ಶಿಕ್ಷಕರಿಗೆ ಹೆಚ್ಚಿನ ಗೌರವಧನವನ್ನು ನೀಡುವಂತೆ ಶಿಕ್ಷಕರ ವೇದಿಕೆ ಪರವಾಗಿ ಸಕರ್ಾರವನ್ನು ಒತ್ತಾಯಿಸಿದರು. ಸೋಂದಾ ಜೈನ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಅಖಿಲ ಕನರ್ಾಟಕ ಜೈನ ಶಿಕ್ಷಕರ ವೇದಿಕೆಯ ಗೌರವಾಧ್ಯಕ್ಷ ಧರ್ಮಸ್ಥಳದ ಸುರೇಂದ್ರಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಮಯದಲ್ಲಿ ಸದಲಗಾದ ಡಾ.ಪಿ.ಎಂ.ಭೋಜೆ ಅವರಿಗೆ ಮಿಜರ್ಿ ಅಣ್ಣಾರಾಯ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದರಂತೆ ಗದಗದ ಪಿ.ಎ.ಕುಲಕಣರ್ಿ, ಮೈಸೂರಿನ ಡಾ. ಎಚ್.ಎ. ಪಾಶ್ರ್ವನಾಥ, ದಕ್ಷಿಣ ಕನ್ನಡದ ಎಂ. ಪ್ರಸನ್ನಕುಮಾರ, ಹುಬ್ಬಳ್ಳಿಯ ಅನಿಲ ಚೌಗಲಾ, ಚಿಕ್ಕಬಳ್ಳಾಪೂರದ ಎ.ಸುಜಾತಾ ಅವರಿಗೆ ಜ್ಞಾನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಂಜಾನೆ ಬೆಂಗಳೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವ್ಯವಸ್ಥಾಪಕ ನಿದರ್ೇಶಕರಾದ ರಮೇಶ ಉಮರಾಣಿ ಅವರಿಂದ ಸಶಕ್ತ ಯುವಕರ ನಿಮರ್ಾಣದಲ್ಲಿ ಶಿಕ್ಷಕರ ಪಾತ್ರ ಕುರಿತು ಸಂವಾದ ಗೋಷ್ಠಿ ಜರುಗಿತು.
ಮಧ್ಯಾಹ್ನ ವಿಜಯಪೂರದ ಹಿರಿಯ ಉಪನ್ಯಾಸಕರಾದ ಡಾ. ಅಶೋಕ ನಿಂಬಕರ ಅವರಿಂದ ಬದಲಾಗುತ್ತಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿನ ಸವಾಲುಗಳ ಕುರಿತು ಚಿಂತನ ಗೋಷ್ಠಿ ಜರುಗಿತು. ಸಾಯಂಕಾಲ ಅಖಿಲ ಕನರ್ಾಟಕ ಜೈನ ಶಿಕ್ಷಕರ ವೇದಿಕೆಯ ಗೌರವಾಧ್ಯಕ್ಷರು ಧರ್ಮಸ್ಥಳದ ಸುರೇಂದ್ರಕುಮಾರ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಿತು. ರಾಜ್ಯದ ಮೂಲೆ ಮೂಲೆಗಳಿಂದ ಅಖಿಲ ಕನರ್ಾಟಕ ಜೈನ ಶಿಕ್ಷಕರ ವೇದಿಕೆ ಸದಸ್ಯರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.
ಈ ಸಮಯದಲ್ಲಿ ರಮೇಶ ಉಮರಾಣಿ, ಡಾ. ಭಾರತಿ ಸವದತ್ತಿ, ಸಾತಪ್ಪ ಗೊಂಗಡಿ, ಡಾ. ಪದ್ಮಿನಿ ನಾಗರಾಜು, ಅರುಣಕುಮಾರ ಯಲಗುದ್ರಿ, ಡಾ. ಎಸ್.ಬಿ.ಪಾಟೀಲ, ವಿನೋದ ದೊಡ್ಡಣ್ಣವರ, ಶೀತಲಗೌಡ ಪಾಟೀಲ, ಸಿ.ಎಂ.ಸಾಂಗಲಿ, ಆಶ್ರಮ ಸಂಚಾಲಕ ರಾಜು ಕೇಶವ ನಾಂದ್ರೆ, ಅಶೋಕ ಯಂದಗೌಡರ, ನೇಮಿನಾಥ ನರಸಗೌಡರ, ವೃಷಭ ಚೌಗಲಾ, ಸಂಜಯ ಪಾಯಗೌಡರ, ಶೀತಲ ಮಾಲಗಾಂವೆ, ರವೀಂದ್ರ ನಾಂದಣಿ, ಕುಮಾರ ಮಾಲಗಾಂವೆ, ವಿನೋದ ಬರಗಾಲೆ, ಡಾ. ಅಶೋಕ ಲಿಮಕರ, ಪಿ.ಡಿ.ನ್ಯಾಮಗೌಡರ, ಎಂ.ಎ.ಗಣೆ, ಪ್ರಕಾಶ ಚೌಗಲಾ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಶಿಕ್ಷಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿದ್ಯಾಥರ್ಿಗಳು, ಗ್ರಾಮಸ್ಥರು ಇದ್ದರು.