ಲೋಕದರ್ಶನ ವರದಿ
ಬೆಳಗಾವಿ 19: ನಗರದ ಕೆ.ಎಲ್.ಇ. ಸಂಸ್ಥೆಯ ಲಿಂಗರಾಜ ಕಾಲೇಜು ಇತ್ತೀಚೆಗೆ ಹಮ್ಮಿಕೊಂಡ 'ಕೈರೋಸ್' ಅಂತರ ಕಾಲೇಜು ಸಾಂಸ್ಕೃತಿಕ ಫೆಸ್ಟ್ದಲ್ಲಿ ಜೆಜಿಐ ಸಂಸ್ಥೆಯ ಜೈನ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಉತ್ತಮ ಸಾಧನೆ ಮೆರೆದ ಜನರಲ್ ಚಾಂಪಿಯನ್ ತಮ್ಮದಾಗಿಸಿಕೊಂಡಿದ್ದಾರೆ.
ಮಾಸ್ಟರ್ ಮತ್ತು ಮಿಸ್ ಹಾಗೂ ಫೋಟೊಗ್ರಾಫಿ ವಿಭಾಗದಲ್ಲಿ ಪ್ರಥಮ ಸ್ಥಾನ, ರ್ಯಾಂಪವಾಕ್, ನೃತ್ಯ ಹಾಗೂ ಜಾಹೀರಾತು ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡ ವಿದ್ಯಾಥರ್ಿಗಳು ವಿವಿಧ ಸಾಂಸ್ಕೃತಿಕ ಸ್ಪಧರ್ೆಗಳಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದಾರೆ. ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ನೀಡಿದ ಅಧ್ಯಾಪಕ ವಿವೇನಾಂದ ತಳಗಡಿ ಅವರಿಗೆ 'ಮೆಂಟರ್ ಚಾಲೆಂಜ್' ಬಹುಮಾನ ಪಡೆದುಕೊಂಡಿದ್ದಾರೆ.
ವಿದ್ಯಾಥರ್ಿಗಳ ಸಾಧನೆಗೆ ಜೆಜಿಐ ಗೌನರ್ಿಂಗ್ ಕೌನ್ಸಿಲ್ ಸದಸ್ಯರು ಹಾಗೂ ಜೈನ ಪಿಯು ಕಾಲೇಜ್ ಮತ್ತು ಜೈನ ಹೆರಿಟೇಜ್ ಸ್ಕೂಲ್ನ ನಿದರ್ೇಶಕರಾದ ಶ್ರದ್ಧಾ ಕಟವಟೆ, ಜೈನ ಪಿಯು ಕಾಲೇಜಿನ ಪ್ರಾಚಾರ್ಯರಾದ ರೋಹಿಣಿ ಕೆ.ಬಿ, ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ವಿದ್ಯಾಥರ್ಿಗಳನ್ನು ಅಭಿನಂದಿಸಿದ್ದಾರೆ.