ಇಂಡಿ 12: ’ವಿದ್ಯಾರ್ಥಿಗಳು ಓದುವ,ಬರೆಯುವ,ಜ್ಞಾನ ಬೆಳೆಸಿಕೊಳ್ಳುವ ಜೊತೆಗೆ ಬದುಕಿಗೆ ಅಗತ್ಯವಾದ ಮಾನವೀಯ ಮೌಲ್ಯ ಮತ್ತು ಗುಣಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಹಾಗೂ ತಂದೆ ತಾಯಿ ರುಣ ಮುಟ್ಟಿಸಿ ಎಂದು ಚಿಕ್ಕಾಲಗುಂಡಿಯ ಶ್ರೀ ಶಿವಶರಣಾನಂದ ಮಾಹಾಸ್ವಾಮಿಗಳು ಹೇಳಿದರು.
ಅವರು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಜೈ ಹನುಮಾನ್ ಕೋಚಿಂಗ್ ಕ್ಲಾಸಸ್ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಜೀವನ ಬಂಗಾರ ಜೀವನ, ವಿದ್ಯಾರ್ಥಿಗಳು ಮನಸ್ಸು ಕೊಟ್ಟು, ಶ್ರಮ ಪಟ್ಟು ವಿದ್ಯಾ ಅಭ್ಯಾಸ ಮಾಡಿ ತಂದೆ ತಾಯಿಗಳ ಮುಟ್ಟಿಸಿ ಬೇಕು ಎಂದು ಹೇಳಿದರು. ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿ ಮಾತನಾಡಿದ ಕನಕನಾಳದ ಗಿರಿಜಾನಂದ ಮಹಾರಾಜರು ಜೀವನದ ಅತ್ಯಮೂಲ್ಯ ಘಟ್ಟ ಎಂದರೆ ಅದು ವಿದ್ಯಾರ್ಥಿ ಜೀವನ ವಿದ್ಯಾರ್ಥಿಯ ಜೀವನ ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿಯ ಮೂಲಾಧಾರ. ಒಬ್ಬ ವಿದ್ಯಾರ್ಥಿ ತನ್ನ ಜೀವನದಲ್ಲಿ ಯಶಸ್ವಿಯಾಗಬೇಕಾದರೆ.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬೇಗನೆ ಯಶಸ್ಸ, ಧೈರ್ಯ ಕಳೆದುಕೊಳ್ಳಬೇಡಿ.. ಯಾವುದೇ ಕಾರಣಕ್ಕೂ ಬಿಟ್ಟು ಕೊಡಬೇಡಿ. ಶಾಲೆಯಲ್ಲಿ ಉತ್ತಮ ಗ್ರೇಡ್ ನಿಮ್ಮದಾಗಬೇಕು ಎಂದು ಹೇಳಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಬಾಬುಸಾಹುಕಾರ ಮೇತ್ರಿ, ತಮ್ಮಣ್ಣ ಪೂಜಾರಿ ಸೇರಿದಂತೆ ಅನೇಕರು ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ಸಿ ಎಂ ಹೂಗಾರ, ಚಂದ್ರಶೇಖರ ರೂಗಿ, ಅಶೋಕ ಮಿರ್ಜಿ, ರವಿ ಹೊಸಮನಿ, ಬಸವರಾಜ ಗಬ್ಬೂರ, ರಾಕೇಶ್ ವಾಲಿಕಾರ, ಶಿವಶಂಕರ್ ಹಿಳ್ಳಿ,ಧರೇಪ ಮೇತ್ರಿ, ಸೈಯದ್ ನಧಾಪ್, ಬಸವರಾಜ ತಾರಾಪೂರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಶಿಕ್ಷಕರಾದ ಡಿ ಸಿ ತೇಲಿ ಸ್ವಾಗತಿಸಿದರು, ಈರಣ್ಣ ರೂಗಿ, ನಿರೂಪಿಸಿದರು, ಎನ್ ಸಿ ಕುಂಬಾರ ವಂದಿಸಿದರು.