ಗೋಲ್ಡನ್ ಸ್ಟಾರ್ ಜನ್ಮದಿನದಂದು ಜಗ್ಗೇಶ್ ಟ್ವೀಟ್


ಬೆಂಗಳೂರು, ಜುಲೈ 2: ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್‍ 40ನೇ ವರ್ಷದ ಜನ್ಮದಿನದಂದು ಚಿತ್ರರಂಗದ ಬಹುತೇಕ ನಟ, ನಟಿಯರು ಶುಭ ಹಾರೈಸಿದ್ದಾರೆ. 

  ನಟ ಜಗ್ಗೇಶ್‍, ನಿರ್ದೇಶಕ ಪ್ರೀತಮ್ ಗುಬ್ಬಿ, ರಘುರಾಮ್, ಹಾಸ್ಯ ನಟ ರವಿಶಂಕರ್ ಗೌಡ, ಧರ್ಮಣ್ಣ ಕಡೂರ್ ಸೇರಿದಂತೆ ಬಹುತೇ ನಟ, ನಟಿಯರಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. 

  ‘ನಾವಿಬ್ಬರೂ ಒಂದೇ ನಾಣ್ಯದ ಎರಡು ಮುಖ’ ಎಂದಿರುವ ಜಗ್ಗೇಶ್,  ಇವನು ಅಡಕಮಾರನಹಳ್ಳಿ,  ನಾನು ಜಡೆಮಾಯಸಂದ್ರ!ಇಬ್ಬರಿಗೂ ಪ್ರತಿಭೆಯೇ ಗಾಡ್ ಫಾದರ್!  ನನ್ನಂತೆ ಇವನಿಗೂ ಜೋತಿಷ್ಯಾಸ್ತ್ರ ಇಷ್ಟದ ವಿಷಯ!ನನ್ನಂತೆ ಅಳೆದು ತೂಗಿ ಜನಸೇರುತ್ತಾನೆ! ನನ್ನಂತೆ ಮೇಲೆ ನಗು ಒಳಗೆ ಒಬ್ಬನೆ ಜೀವಿಸುತ್ತಾನೆ!ನಮ್ಮಿಬ್ಬರನ್ನು ಅನ್ಯರು ಯಾಮಾರಿಸಲು ಸ್ವಲ್ಪಕಷ್ಟ!ಕಾರಣ ರಸ್ತೆಯಿಂದ ಬಂದವರು! . . ಜನ್ಮ ದಿನದ ಶುಭಾಶಯಗಳು' ಎಂದು ಹೇಳಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಗಣೇಶ್, 'ಥ್ಯಾಂಕ್ಯೂ ಅಣ್ಣ' ಎಂದು ಮರು ಟ್ವೀಟ್ ಮಾಡಿದ್ದಾರೆ.