ಖಾಸಗಿ ಪಾರ್ಕಿಂಗ್ ಕೇಂದ್ರದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾಜರ್ಿಂಗ್ ಕೇಂದ್ರ ತೆರೆಯಲು ಶೀಘ್ರವೇ ಆದೇಶ: ಜಗದೀಶ್ ಶೆಟ್ಟರ್

ಬೆಂಗಳೂರು, ಡಿ.19:      ಪ್ರತಿ  ಶಾಪಿಂಗ್ ಮಾಲ್, ಅಪಾಟರ್್ಮೆಂಟ್ ಇತರೆ ಪಾಕರ್ಿಂಗ್ ಕೇಂದ್ರಗಳಲ್ಲಿ ಕಡ್ಡಾಯವಾಗಿ  ಎಲೆಕ್ಟ್ರಿಕ್ ವೆಹಿಕಲ್ ಚಾಜರ್ಿಂಗ್ ಕೇಂದ್ರ ತೆರೆಯುವಂತೆ ಶೀಘ್ರವೇ ರಾಜ್ಯ ಸರಕಾರ  ಆದೇಶ ಹೊರಡಿಸಲು ಸಿದ್ಧತೆ ನಡೆಸಿದೆ ಎಂದು  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ  ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಬೆಂಗಳೂರು  ಚೇಂಬರ್ ಆಫ್ ಇಂಡಸ್ಟ್ರೀ ಆ್ಯಂಡ್ ಕಾಮರ್ಸ್ (ಬಿಸಿಐಸಿ) ವತಿಯಿಂದ ಆಯೋಜಿಸಿದ್ದ  ಎಲೆಕ್ಟ್ರಿಕ್ ವೆಹಿಕಲ್ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡಿದರು.

ಕರ್ನಾಟಕದಲ್ಲಿ  ಎಲೆಕ್ಟ್ರಿಕ್ ವೆಹಿಕಲ್ ಬಳಕೆ ಸಂಬಂಧ ಪ್ರತ್ಯೇಕವಾಗಿ ಪಾಲಿಸಿ ತರಲು ಹೊರಟಿದೆ.  ಈಗಾಗಲೇ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಸಂಚಾರ ಪ್ರಾರಂಭವಾಗಿದ್ದು, ಇದಕ್ಕೆ  ಸಂಬಂಧಿಸಿದ ವ್ಯವಸ್ಥೆ ಕೂಡ ಆಗಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ  ಅಪಾಟರ್್ಮೆಂಟ್ ಶಾಪಿಂಗ್ ಸೆಂಟರ್ ಮಲ್ಟಿ ಪಾಕರ್ಿಂಗ್ ಸೆಂಟರ್ಗಳಲ್ಲಿ ಕಡ್ಡಾಯವಾಗಿ  ಎಲೆಕ್ಟ್ರಿಕ್ ವೆಹಿಕಲ್ ಚಾಜರ್ಿಂಗ್ ಕೇಂದ್ರ ತೆರೆಯಬೇಕೆಂದು ಆದೇಶ ಹೊರಡಿಸಲಾಗುವುದು.  ಪ್ರಸ್ತುತ ಬೆಸ್ಕಾಂ 12 ಸ್ಥಳಗಳಲ್ಲಿ ಚಾಜರ್ಿಂಗ್ ಕೇಂದ್ರ ತೆರೆದಿದ್ದು, ಶೀಘ್ರವೇ 100  ಸ್ಥಳಗಳಲ್ಲಿ ಚಾಜರ್ಿಂಗ್ ಸೆಂಟರ್ ಕಾರ್ಯಾರಂಭ ಮಾಡಲಿದೆ. ಈ ಕೇಂದ್ರಗಳು ಎಲ್ಲೆಲ್ಲಿ  ಲಭ್ಯವಿರಲಿದೆ ಎಂಬುದರ ಮಾಹಿತಿ ನೀಡಲು ಪ್ರತ್ಯೇಕ ಆ್ಯಪ್ ತೆರೆಯಲಾಗುತ್ತದೆ ಎಂದರು.

ಸರಕಾರಿ  ಸ್ವಾಮ್ಯದಲ್ಲಿರುವ ಬಿಎಂಟಿಸಿಯ 300 ಎಲೆಕ್ಟ್ರಿಕ್ ಬಸ್ಗಳ ಸಂಚಾರ  ಪ್ರಾರಂಭಿಸಲಾಗುವುದು. ಭವಿಷ್ಯದಲ್ಲಿ 6000 ಬಸ್ಗಳ ಪೈಕಿ ಶೇ.50 ಬಸ್ಗಳು  ಎಲೆಕ್ಟ್ರಿಕ್ ಬಸ್ ಆಗಿ ಪರಿವರ್ತಿಸಲು ಉದ್ದೇಶಿಸಿದೆ ಎಂದು ವಿವರಿಸಿದರು.

ಎಲೆಕ್ಟ್ರಿಕ್ ವೆಹಿಕಲ್ಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಕ್ಲಸ್ಟರ್ ಕೂಡ ನಿರ್ಮಾಣ ಮಾಡಲಾಗುತ್ತಿದೆ. 

ದೇಶದಲ್ಲಿ ವಾಯುಮಾಲಿನ್ಯ ನಿಯಂತ್ರಿಸುವ ದೃಷ್ಟಿಯಿಂದ ಎಲೆಕ್ಟ್ರಿಕ್  ವೆಹಿಕಲ್ ತರಲುವಲ್ಲಿ ಕೇಂದ್ರ ಸರಕಾರ ಹೆಚ್ಚು ಆಸಕ್ತಿ ತೋರಿದೆ. ಕರ್ನಾಟಕ ಸರಕಾರ ಕೂಡ  ಎಲೆಕ್ಟ್ರಿಕ್ ವೆಹಿಕಲ್ ಪ್ರೋತ್ಸಾಹಿಸುತ್ತಿದೆ. ಎಲೆಕ್ಟ್ರಿಕ್ ವೆಹಿಕಲ್ಗಳ  ಮೋಟಾರಿನ ಶುಲ್ಕ ಹೆಚ್ಚಿದೆ. ಇವಿ ಮೋಟಾರು ತಯಾರಿಕಾ ಕೇಂದ್ರವನ್ನೂ ಇಲ್ಲಿಯೇ  ಪ್ರಾರಂಭಿಸುವ ಹೆಜ್ಜೆ ಕೂಡ ನಮ್ಮ ಸರಕಾರ ಇಟ್ಟಿದಡ. ಒಟ್ಟಾರೆ ಇಂಧನ ರಹಿತ ವಾಹನಗಳನ್ನು  ರಸ್ತೆಗಿಳಿಸುವ ಮೂಲಕ ಪರಿಸರ ಸ್ನೇಹಿ ವಾಹನ ತರಲು ನಮ್ಮ ಸರಕಾರ ಬದ್ಧವಿದೆ ಎಂದು  ಹೇಳಿದರು.