ಅಮರಾವತಿ, ನ 5: ಮಹತ್ವದ ಬೆಳವಣಿಗೆಯೊಂದರಲ್ಲಿ ಆಂಧ್ರಪ್ರದೇಶ ಸರ್ಕಾರ ಪ್ರತಿ ವರ್ಷ ನೀಡಲಾಗುತ್ತಿದ್ದ ಎಪಿಜೆ ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರಕ್ಕೆ ಹೊಸ ನಾಮಕರಣ ಮಾಡಿದೆ.
ಕಲಾಂ ಪ್ರತಿಭಾ ಪುರಸ್ಕಾರಕ್ಕೆ ಬದಲಾಗಿ ಇನ್ಮುಂದೆ ಅವರ ಜನ್ಮದಿನದಂದು ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರ ತಂದೆ ರಾಜಶೇಖರ ರೆಡ್ಡಿ ಹೆಸರಿನಲ್ಲಿ ಪ್ರಶಸ್ತಿ ನೀಡುವ ಆದೇಶ ಹೊರಡಿಸಿ ತೀರ್ಮಾನ ಕೈಗೊಳ್ಳಲಾಗಿದೆ.
ಪ್ರತಿವರ್ಷ ನವೆಂಬರ್ 1 ಕ್ಕೆ 'ಮಿಸೈಲ್ ಮ್ಯಾನ್' ಎಪಿಜೆ ಅಬ್ದುಲ್ ಕಲಾಂ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರದಿಂದ ಈ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೀಗ ಅದರ ಹೆಸರನ್ನು ಬದಲಾವಣೆ ಮಾಡಿ ತಂದೆ ರಾಜಶೇಖರ ರೆಡ್ಡಿ ಹೆಸರಿನಲ್ಲಿ ಪ್ರಶಸ್ತಿ ವಿತರಿಸಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.