ಲೋಕದರ್ಶನವರದಿ
ರಾಣೇಬೆನ್ನೂರು 27 : ಶಾಲೆಯ ಅಭಿವೃದ್ಧಿಯ ಜೊತೆಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಬೇಕು. ಶಿಕ್ಷಣ ಇಲಾಖೆ ಒಂದು ಮುಖವಾದರೆ, ಹಿರಿಯ ವಿದ್ಯಾಥರ್ಿಗಳು, ಗ್ರಾಮಸ್ಥರು ನಾಣ್ಯದ ಇನ್ನೊಂದು ಮುಖವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಿಆರ್ಪಿ ಜಗದೀಶ ಹುಲ್ಯಾಳ ಹೇಳಿದರು.
ತಾಲೂಕಿನ ಗಂಗಾಪುರ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಹಿರಿಯ ವಿದ್ಯಾಥರ್ಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು, ಸಕರ್ಾರವು ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಎಲ್ಲ ವಿದ್ಯಾಥರ್ಿಗಳು ಅದರ ಸದುಪಯೋಗ ಪಡೆಯಬೇಕು ಎಂದರು.
ಮುಖ್ಯಶಿಕ್ಷಕ ಎಸ್.ಸಿ.ಷಡಕ್ಷರಿಮಠ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳ ಬೌದ್ದಿಕ ಮಟ್ಟಕ್ಕೆ ಸಮಾನರಾಗಿ ಬೆಳೆಯುವಂತೆ ಎಲ್ಲ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಸ್ಥಳೀಯ ಸಿದ್ದಾರೂಢ ಮಠದ ಮರುಳ ಶಂಕರ ಸ್ವಾಮೀಜಿ ಮಾತನಾಡಿ, ಗಂಗಾಪುರ ಗ್ರಾಮದ ವಿದ್ಯಾಥರ್ಿಗಳು ಐಎಎಸ್, ಐಪಿಎಸ್ ಮತ್ತು ಕೆಎಎಸ್ ಕಲಿತು ಅಧಿಕಾರಿಗಳಾಗಬೇಕೆಂಬ ನಮ್ಮ ಮಹಾದಾಸೆಯಾಗಿದೆ ಎಂದರು.
ಹಳೆ ವಿದ್ಯಾಥರ್ಿಗಳಾದ ಸುರೇಶ ಮಾಸ್ಟಿ, ಸವಿತಾ ಸಿದ್ದಪ್ಪನವರ, ದಾನಪ್ಪ ಚಕ್ರಸಾಲಿ, ಮಂಜುನಾಥ ಅಣ್ಣಿಗೇರಿ, ಡಾ| ಸೋಮಲಿಂಗಪ್ಪ ಚಿಕ್ಕಳ್ಳಲವರ, ನಾಗರಾಜ ಕೃಷ್ಣಾಪುರ, ಸೋಮಪ್ಪ ಚಿಕ್ಕಳ್ಳವರ, ನಿಂಗಪ್ಪ ಖಂಡೆಪ್ಪಳವರ, ಅಶೋಕ ಹಲವಾಗಲ, ಬಸವರಾಜ ನಾಯಕ, ಮಹೇಶ ಪಾಟೀಲ ಅವರು 1 ಲಕ್ಷ ಹಣ ಸಂಗ್ರಹಿಸಿ ಶಾಲೆಗೆ ವಿವಿಧ ಪಠ್ಯಪೂರಕ ಸಾಮಗ್ರಿಗಳನ್ನು ಕೊಡಿಸಲು ತೀಮರ್ಾನಿಸಿದರು.
ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ ಗುಡಗೂರು ಅಧ್ಯಕ್ಷತೆ ವಹಿಸಿದ್ದರು. ಎ.ಡಿ.ಲೆಕ್ಕಪ್ಪಳವರ, ಎಸ್.ಎ.ಸೋಮನಕಟ್ಟಿ, ಎಂ.ಎಫ್.ಚಕ್ರಸಾಲಿ. ನಾಗರಾಜ ಗಂಗಣ್ಣನವರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.