ಜಗದೀಶ ಬೆನ್ನೂರಗೆ ಸಾಹಿತ್ಯ ಸೇವಾ ಭಾರ್ಗವ ಪ್ರಶಸ್ತಿ


ಲೋಕದರ್ಶನ ವರದಿ

ಕೊಪ್ಪಳ 01: ಪಕ್ಕದ ಹೊಸಪೇಟೆ ತಾಲೂಕಿನ ಚಿತ್ತವಾಡ್ಗಿ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಯುವ ಸಾಹಿತಿ ಜಗದೀಶ ಬೆನ್ನೂರ ಅವರಿಗೆ "ರಾಜ್ಯಮಟ್ಟದ ಸಾಹಿತ್ಯ ಸೇವಾ ಭಾರ್ಗವ ಪ್ರಶಸ್ತಿ" ಲಭಿಸಿದೆ.

ಸಂಗೀತ ಭಾರತಿ ಹಾಗೂ ಆದಿಗುರು ಶಂಕರ ಸಾಹಿತ್ಯ ಪರಿಷತ್ತು ಚಿತ್ತವಾಡ್ಗಿ, ಇವರ ವತಿಯಿಂದ ಹೊಸಪೇಟೆಯ ಮಹಿಳಾ ಸಮಾಜ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ "ಮಾಸಿಕ ಚಿಂತನ ಸಂಭ್ರಮಾಚರಣೆ" ಕಾರ್ಯಕ್ರಮದಲ್ಲಿ ಚಿತ್ತವಾಡ್ಗಿ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಯುವ ಸಾಹಿತಿ ಜಗದೀಶ ಬೆನ್ನೂರ ಅವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ರಾಜ್ಯಮಟ್ಟದ ಸಾಹಿತ್ಯ ಸೇವಾ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಿದೆ.  

ಪ್ರಶಸ್ತಿ ಪುರಸ್ಕೃತ ಬೆನ್ನೂರರವರಿಗೆ ಅವರ ಸ್ನೇಹಿತರ ಬಳಗ, ಕುಟುಂಬ ವರ್ಗ ಹಾಗೂ ಕಾಲೇಜಿನ ಪ್ರಾಚಾರ್ಯರು, ಸಹ ಉಪನ್ಯಾಸಕರು ಮತ್ತು ವಿದ್ಯಾಥರ್ಿಗಳು ಅಭಿನಂಧನೆ ಸಲ್ಲಿಸಿದ್ದಾರೆ.