ಜಗದ್ಗುರು ಮೌನೇಶ್ವರ ಜಯಂತೋತ್ಸವ: ವಿಶ್ವಕರ್ಮ ಸಮುದಾಯಕ್ಕೆ ಸರ್ಕಾರ ಸಮಾನ ಹಕ್ಕು ನೀಡಬೇಕು: ಬಸವರಾಜ್
ರಾಣೇಬೆನ್ನೂರು 30: ವಿಶ್ವಕರ್ಮ ಸಮುದಾಯವು ಯಾರಿಗೂ ಬೇಡುವವರಲ್ಲ. ಕೈ ಓಡ್ಡುವವರು ಅಲ್ಲ. ಮತ್ತು ಸವಲತ್ತುಗಳನ್ನು ಪಡೆಯಲು ಬೆನ್ನು ಹತ್ತುವವರು ನಾವಲ್ಲ ಹೀಗಾಗಿ ನಾವು ಸಾಮಾಜಿಕ, ಆರ್ಥಿಕ, ರಾಜಕೀಯ, ಮತ್ತು ಸಾಂಸ್ಕೃತಿಕವಾಗಿ ಇತರರಂತೆ ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲ. ಎಂದು ವಿಶ್ವಕರ್ಮ ನಿಗಮ,ನಿ. ಸದಸ್ಯ ಬಸವರಾಜ್ ಬಡಿಗೇರ್ ಹೇಳಿದರು. ಅವರು ಬುಧವಾರ ಮೌನೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಏರಿ್ಡಸಲಾಗಿದ್ದ, ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಸರಕಾರ ನಮ್ಮ ಸಮುದಾಯಕ್ಕೆ ಸರಿಯಾಗಿ ಗುರುತಿಸಿಲ್ಲ, ನ್ಯಾಯ ಸಮ್ಮತವಾದ ಹಕ್ಕನ್ನು ನಮಗೆ ಒದಗಿಸಿಲ್ಲ.
ನಾವು ಸಹಾ ಸರಕಾರದ ಬೆನ್ನು ಹತ್ತಿಲ್ಲ, ಹತ್ತುವುದು ಇಲ್ಲ. ಸಂವಿಧಾನದಲ್ಲಿ ಪ್ರತಿಯೊಂದು ಸಮಾಜಕ್ಕೂ ಸಮಾನ ಹಕ್ಕು ಇದೆ. ನಮಗೆ ಹಕ್ಕು ಇರುವಂತೆ ಸಮುದಾಯವನ್ನು ಗುರುತಿಸಿ ಸರ್ಕಾರ ನಮಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಸ್ವಯಂ ಪ್ರೇರಣೆ ಇಂದ ಮುಂದಾಗಲಿ ಎಂದು ಆಗ್ರಹಿಸಿದರು. ಮೌನೇಶ್ವರ ಕಮಿಟಿ ಅಧ್ಯಕ್ಷ ಓಂಕಾರ್ಪ ಪೂ.ಅರ್ಕಾಚಾರ್ ಅವರು ಮಾತನಾಡಿ, ಕಳೆದ 90 ವರ್ಷಗಳಿಂದ ಮೌನೇಶ್ವರ ಸ್ವಾಮಿಯ ಜಯಂತೋತ್ಸವವನ್ನು ಆಚರಿಸುತ್ತಾ ಬರುತ್ತಿದ್ದೇವೆ. ಪ್ರಸ್ತುತ ದಿನಮಾನಗಳಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ತಾತ್ವಿಕ ಚಿಂತನೆಯನ್ನು ಸಮಾಜದ ಯುವಕರು ಅಳವಡಿಸಿಕೊಂಡಿದ್ದು, ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದ್ದೇವೆ ಎಂದರು.
ಪ್ರತಿ ವರ್ಷದಂತೆ ಈ ವರ್ಷವು ಸಹಾ,ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜವಳ, ಉಪನಯನ,ಮತ್ತು ಸಾಮೂಹಿಕ ವಿವಾಹ ಕಾರ್ಯಗಳು ಆಯೋಜಿಸಿದ್ದೇವೆ. ಅಲ್ಲದೆ ಅಂದೆ ಮಧ್ಯಾಹ್ನ 1:ಕ್ಕೆ ಸಾರ್ವಜನಿಕವಾಗಿ ಅನ್ನ ಸಂತರೆ್ಣ ಜರುಗಲಿದೆ.ಎಲ್ಲ ಕಾರ್ಯಕ್ರಮಗಳಲ್ಲಿ ಸಮುದಾಯದ ಎಲ್ಲರೂ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಅವರು, ಮನವಿ ಮಾಡಿದರು. ಮಾಧ್ಯಮಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ವೀರಣ್ಣ ಅರ್ಕಾಚಾರಿ, ರಾಘವೇಂದ್ರ ಕಮ್ಮಾರ್, ಚಿದಾನಂದ ಬಡಿಗೇರ್, ನಾಗರಾಜಾಚಾರಿ ಬಡಿಗೇರ್, ಚಂದ್ರು ಹುಲ್ಲತ್ತಿ ಮತ್ತಿತರರು ಇದ್ದರು.