ಜಬ್ಬಾರ ಕಲಬುರ್ಗಿಯವ ಅರೋಪದಲ್ಲಿ ಯಾವುದೇ ಹುರುಳಿಲ್ಲ : ಎಸ್.ಆರ್.ನವಲಿಹಿರೇಮಠ

ಹುನಗುಂದ19; ಜಾತ್ಯಾತೀಯ ಜನತಾ ದಳದ ತಾಲೂಕ ಅಧ್ಯಕ್ಷ ಜಬ್ಬಾರ ಕಲಬುರ್ಗಿ ಅವರು ಜಾತ್ಯಾತೀತ ಜನತಾ ದಳದ ಜಿಲ್ಲಾಧ್ಯಕ್ಷ ಎಸ್.ಆರ್.ನವಲಿಹಿರೇಮಠರು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆಂದು ಆರೋಪಿಸಿರುವ ಅವರ ಹೇಳಿಕೆಯಲ್ಲಿ ಹುರುಳಿಲ್ಲ ಅದು ನಿರಾಧಾರ ಮತ್ತು ಪೂರ್ವಗ್ರಹ ಪೀಡಿತ ಹೇಳಿಕೆಯಾಗಿದೆ ಎಂದು ಜಾತ್ಯಾತೀತ ಜನತಾ ದಳದ ಜಿಲ್ಲಾಧ್ಯಕ್ಷ ಎಸ್.ಆರ್.ನವಲಿ ಹಿರೇಮಠ ತಿಳಿಸಿದ್ದಾರೆ.                                                                   ಪ್ರತಿಕಾ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಳೆದ ಬಾರಿ ವಿಧಾನಸಭೆಯ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಿದಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನನಗೆ ಬಾಹ್ಯ ಬೆಂಬಲ ನೀಡಿ ನನ್ನ ಪರವಾಗಿ ಪ್ರಚಾರ ಮಾಡಿದ್ದಾರೆ ಎನ್ನುವ ಒಂದೇ ಒಂದು ಕಾರಣದಿಂದ ಅವರ ಋಣವನ್ನು ತೀರಿಸುವ ಸಲುವಾಗಿ ಅವರು ಅಣತಿಯಂತೆ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದ ಹೊಣೆಯನ್ನು ಹೊತ್ತು ಅಲ್ಪಾವಧಿಯಲ್ಲಿಯೇ ಜಿಲ್ಲಾಧ್ಯಂತ ಸಂಚರಿಸಿ ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದಲ್ಲದೇ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಪಕ್ಷ ಕಛೇರಿಯನ್ನು ಸ್ಥಾಪಿಸಿ ಜಿಲ್ಲೆಯಲ್ಲೂ ಇನ್ನು ಜಾತ್ಯಾತೀತ ಜನತಾದಳ ಪಕ್ಷ ಜೀವಂತವಾಗಿದೆ ಎನ್ನುವುದ್ದನ್ನು ತೋರಿಸುವ ಕಾರ್ಯವನ್ನು ಪಕ್ಷ ಸಂಘಟನೆಯ ಮೂಲಕ ಮಾಡಿದ್ದೇನೆ.ಹುನಗುಂದ ಇಲಕಲ್ಲ ಮತ್ತು ಗುಳೇದಗುಡ್ಡ ನಗರಗಳ ಸ್ಥಳೀಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗಳ ಪರ ಪ್ರಚಾರ ಮಾಡಿ ಗೆಲುವಿಗೆ ಶ್ರಮಿಸಿ ಜಿಲ್ಲಾಧ್ಯಂತ ಪಕ್ಷದ ಮತ ಗಳಿಕೆಯ ಪ್ರಮಾಣವನ್ನು ಹೆಚ್ಚಿಕೆ ದುಡಿದ್ದೇನೆ.ಕಳೆದ ಲೋಕಸಭೆಯ ಚುನಾವಣೆಯಲ್ಲಿ ಮೈತ್ರಿ ಧರ್ಮದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಇದು ಪಕ್ಷದ ಅಣತೆ ಮೀರುವ ಮತ್ತು ಪಕ್ಷ ವಿರೋಧಿ ಚಟುವಟಕೆ ಮಾಡುವ ಪ್ರಮೇಯೆ ಉದ್ಭವಿಸುವುದಿಲ್ಲ.ತಾನೊಬ್ಬ ಪಕ್ಷದ ಅತ್ಯಂತ ಪ್ರಾಮಾಣಿಕ ಕಾರ್ಯಕರ್ತನೆಂದು ಬಡಾಯಿ ಕೊಚ್ಚಿಕೊಳ್ಳುವ ತಾಲೂಕಿನ ಹಾಲಿ ಪಕ್ಷದ ಅಧ್ಯಕ್ಷರು ತಮ್ಮ ಅಧಿಕಾರ ಅವಧಿಯಲ್ಲಿ ಕರೆದ ಕಾರ್ಯಕರ್ತರ ಸಭೆ ಎಷ್ಟು ? ಸ್ಥಾಪಿಸಿದ ಪಕ್ಷದ ಗ್ರಾಮ ಘಟಕಗಳು ಎಷ್ಟು ? ಎಂಬುವುದ್ದನ್ನು ತಾವು ಆತ್ಮವಲೋಕನ ಮಾಡಿಕೊಳ್ಳಿ.ಪಕ್ಷ ಗೌರವದಿಂದ ಕೊಟ್ಟ ಲೆಟರ್ಹೆಡ್ ಮತ್ತು ವಿಜಿಟಿಂಗ್ ಕಾರ್ಡಗಳನ್ನು ಆಧರಿಸಿ ಸಮಯ ಸಾಧಕತನದ ರಾಜಕಾರಣ ಮಾಡುವ ನಿಷ್ಕ್ರಿಯ  ಅಧ್ಯಕ್ಷರಿಂದಲೇ ಪಕ್ಷ ಅವನತಿಯನ್ನು ಕಾಣೋದು.ಪಕ್ಷದ ಉಳಿವಿಗೆ ಪಕ್ಷದ ವರಿಷ್ಠರು ಬಂಡವಾಳಶಾಹಿಗಳಿಗೆ ಮಣಿ ಹಾಕಿದರೂ ಎನ್ನುವ ಜಬ್ಬಾರ ಕಲಬುರ್ಗಿಯವರ ಹೇಳಿಕೆಯು ಪಕ್ಷದ ವರಿಷ್ಠರನ್ನು ಅಪಮಾನಿಸಿದಂತಾಗಿದೆ.ಸದರಿ ವಿಷಯಗಳ ಕುರಿತು ವರಿಷ್ಠರ ಗಮನಕ್ಕೆ ತಂದು ಜಿಲ್ಲೆಯ ಪಕ್ಷದ ಹೊಣೆಗಾರಿಕೆಯಿಂದ ವಿಮುಕ್ತಿಗೊಳ್ಳಿಸಲು ಕೋರಿದಾಗಲೂ ಅವರು ಒತ್ತಾಯದ ಮೇರಿಗೆ ಪಕ್ಷದಲ್ಲಿದ್ದು ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ.ಹುನಗುಂದ ಪುರಸಭೆಯ ಅಧ್ಯಕ್ಷರ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕು ಎನ್ನುವ ನಿರ್ಧಾರ  ಪಕ್ಷದ ಮಾರ್ಗಸೂಚಿಯ ಮೇರಿಗೆ ಹೊರೆತು ವೈಯಕ್ತಿಕವಾಗಿ ಇಂತವರನ್ನೇ ಬೆಂಬಲಿಸಬೇಕು ಎನ್ನುವ ಯಾವ ಒತ್ತಡವನ್ನು ಯಾವ ಆಯ್ಕೆಯಾದ ಸದಸ್ಯರ ಮೇಲೆ ಹಾಕಿಲ್ಲ.ಜಬ್ಬಾರವರಂತ ವ್ಯಕ್ತಿಗಳಿಂದ ಜಾತ್ಯಾತೀತ ಪಾಠವನ್ನು ಕಲಿಯಬೇಕಾಗಿಲ್ಲ .ಜಾತ್ಯಾತೀತ ಗುಣ ನನಗೆ ರಕ್ತಗತವಾಗಿಯೆ ಬಂದಿದೆ.ಇಂತಹ ಹೇಳಿಕಗಳ ಮುಖಾಂತರ ಪಕ್ಷದಲ್ಲಿ ತಮ್ಮ ಅಸ್ತಿತ್ವ ತೋರ್ಪಡಿಸುವುದ್ದನ್ನು ಬಿಟ್ಟು ಪಕ್ಷ ಸಂಘಟನೆಯತ್ತ ಜಬ್ಬಾರ್ ಅವರು ಮನಸು ಮಾಡಲಿ ಎಂದು ಪರೋಕ್ಷ ಟಾಂಗ್ ನೀಡಿದರು.