ದೇಶದ ಸಮರ್ಥ ಉದ್ದಿಮೆಯಾಗಿ ಜೆ.ಕೆ.ಸಿಮೆಂಟ್: ಕಪೂರ

ಲೋಕದರ್ಶನವರದಿ

ಮುಧೋಳ: ಮುದ್ದಾಪುರದ ಜೆ.ಕೆ.ಸಿಮೆಂಟ್ ಸಂಸ್ಥೆ ಸುರಕ್ಷೆ, ಉತ್ಪಾದನೆ, ಪರಿಸರದ ಕಾಳಜಿ ಮುಂತಾದವುಗಳಲ್ಲಿ ದೇಶದಲ್ಲೆ ಮುಂಚುಣಿಯಲ್ಲಿರಲು ಇಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕಾರಣಎಂದು ಜೆ.ಕೆ.ಸಿಮೆಂಟ್ ಉದ್ದಿಮೆ ಸಮೂಹದ ಬಿಜನೆಸ್ ಹೆಡ್ರ ಜನೀಶಕಪೂರ ಹೇಳಿದರು.

   ತಾಲ್ಲೂಕಿನ ಮುದ್ದಾಪುರ ಗ್ರಾಮ ವ್ಯಾಪ್ತಿಯ ಜೆ.ಕೆ.ಸಿಮೆಂಟ್ ಸಂಸ್ಥೆ ಉತ್ಪಾದನೆ ಆರಂಭಿಸಿ ಹತ್ತು ವರ್ಷವಾದ ಪ್ರಯುಕ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿ ಪ್ಲಾಸ್ಟಿಕ್ ಸಂಪೂರ್ಣ ನಾಶಮಾಡಲು ಬೃಹತ್ ಸಿಮೆಂಟ್ ಕಂಪನಿಯಲ್ಲಿ ಅತೀ ಹೆಚ್ಚು ತಾಪಮಾನದಲ್ಲಿ ಸುಡುವುದರಿಂದ ಪರಿಸರಕ್ಕೆ ಹಾನಿಯಾಗಲಾರದು ಈ ಸಂಸ್ಥೆ ಕೂಡಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು

ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಮಾತನಾಡಿ ಸಂಸ್ಥೆ  ಇಲ್ಲಿ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು.

        ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸಿದರು. ಕಾಖರ್ಾನೆಯ ಮುಖ್ಯಸ್ಥ ಆರ್.ಬಿ.ಎಂ.ತ್ರೀಪಾಠಿ ಸಂಸ್ಥೆ ಬೆಳೆದುಬಂದ ದಾರಿಯನ್ನು ವಿವರಿಸಿದರು.  ಹಿರಿಯ ಅಧಿಕಾರಿಗಳಾದ ಉಮಾ ಶಂಕರ ಚೌಧರಿ, ಜಯಂತ ಮಲೋತ್ರಾ, ಕಪೀಲ ಅಗರವಾಲ, ಆರ್.ಸಿ.ಪುರೋಹಿತ, ಶಿವಯ್ಯಸ್ವಾಮಿ, ಸುಮಿತಸಿಂಗ್ ಮುಂತಾದವರು ಇದ್ದರು. ಸಿಬ್ಬಂದಿ ಹಾಗೂ ಕುಟುಂಬದವರಿಗಾಗಿ ಮನರಂಜನಾ ಕಾರ್ಯಕ್ರಮ ನಡೆಯಿತು