ಮೂಡಲಗಿ ಪುರಸಭೆಗೆ 23ವಾರ್ಡಗಳಿಗೆ ಜೆಡಿಎಸ್ ಸ್ಪಧರ್ೆ : ಗಡಾದ


ಮೂಡಲಗಿ 07: ಸ್ಥಳೀಯ ಪುರಸಭೆಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಎಲ್ಲ 23ವಾರ್ಡಗಳಲ್ಲಿ ಸ್ಪಧರ್ಿಸುವುದಾಗಿ ಅರಬಾಂವಿ ಮತಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯಥರ್ಿ ಭೀಮಪ್ಪ ಗಡಾದ ಹೇಳಿದರು.

    ಅವರು ನಾಗನೂರ ಸಮರ್ಥ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸೋಮವಾರ ಸಂಜೆ ನಡೆದ ಜೆಡಿಎಸ್ ಕಾರ್ಯಕರ್ತರ ಹಾಗೂ ಚುನಾವಣೆಯ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ಪುರಸಭೆಗೆ ವಿಶೇಷ ಅನುದಾನವನ್ನು ನೀಡುವುದಾಗಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬರವಸೆ ನೀಡಿದ್ದು, ಪುರಸಭೆ ಸಮಗ್ರ ಅಭಿವೃದ್ದಿಗಾಗಿ ಕಾರ್ಯಕರ್ತರು ಚುನಾವಣೆಯಲ್ಲಿ ಹಗಲಿರಳು ಶ್ರಮಿಸಬೇಕಾಗಿದೆ ಎಂದರು. 

  ಚುನಾವಣೆಯಲ್ಲಿ ಸ್ಪಧರ್ಿಸುವ ಆಕಾಂಕ್ಷಿಗಳನ್ನು ತಮ್ಮ ತಮ್ಮ ವಾರ್ಡ ಜನರು ಕೂಡಿಕೊಂಡ ಒಮ್ಮತ ಅಭ್ಯಥರ್ಿಯನ್ನು ಆಯ್ಕೆಮಾಡಿ, ಪುರಸಭೆಯ ವ್ಯಾಪ್ತಿಯಲ್ಲಿ ಎಲ್ಲ ಮತದಾರರ ಪ್ರತಿ ಮನೆ ಮನೆಗೆ ತೆರಳಿ ಮತಯಾಚಿಸುವುದರ ಮೂಲಕ ಗೆಲುವಿಗೆ  ಶ್ರಮಿಸುವದಾಗಿ ಹೇಳಿದರು.

  ಅರಭಾಂವಿ ಕ್ಷೇತ್ರದ ಜನತೆ ಈಗ ಮೂಡಲಗಿ ಪುರಸಭೆ ಚುನಾವಣಾ ಫಲಿತಾಂವಶದ ಮೇಲೆ ಕಣ್ಣು ಇಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಪಂ.ಪ, ಗ್ರಾ.ಪಂ  ಮತ್ತು ಸಂಘ ಸಂಸ್ಥೆಗಳ ತಮ್ಮ ವಶಕ್ಕೆ ತೆಗೆದುಕೊಳ್ಳುವದಾಗಿ ತಿಳಿಸಿದರು. 

   ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿನ ರಸ್ತೆ ಸುಧಾರಣೆ,  ಚರಂಡಿ, ಕುಡಿಯುವ ನೀರು ಹಾಗೂ ವಿವಧ ಅಭಿವೃದ್ಧಿಗಳ ಕಾರ್ಯಗಳ ಪಟ್ಟಿಯನ್ನು ಸದ್ಯದಲ್ಲಿ ಬಿಡುಗಡೆಗೊಳಿಸಲಾಗುವದು.  ಈ ಹಿಂದಿನ ಮಾಜಿ ಸಚಿವ ಹಾಗೂ ಶಾಸಕ ವ್ಹಿ.ಎಸ್.ಕೌಜಲಗಿಯವರು ನಿಮರ್ಿಸಿರುವ ಪುರಸಭೆ ಮಳಿಗೆ ಬಾಡಿಗೆ ಜಿಲ್ಲಾ ಸ್ಥಳಗಳಿಂದ ಹೆಚ್ಚು ನಿಗದಿ ಪಡಿಸಿದ್ದಾರೆ. ಈ ಚುನಾವಣೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಾಡಿಗೆಯನ್ನು ಸಡಿಲ್ಲಗೋಳಿಸಿ ಬಡ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಟ್ಟು ಪುಟ್ಪಾತ ವ್ಯಾಪಾರಸ್ಥರಿಗೂ ಸಹ ಪುರಸಭೆ ಭೂ ಬಾಡಿಗೆಯಿಂದ ಮುಕ್ತಗೊಳಿಸುವದಾಗಿ ಹೇಳಿದರು. 

   ಕಲ್ಲೋಳಿಯ ಈರಪ್ಪ ಬೆಳಕೂಡ ಮಾತನಾಡಿ, ಕಳೆದ ವಿಧಾನ ಸಭೆಯಲ್ಲಿ ಜೆಡಿಎಸ್ನ್ನು ಬೆಂಬಲಿಸಿದಂತೆ ಸ್ಥಳೀಯ ಪುರಸಭೆ ಚುನಾವಣೆಯಲ್ಲಿಯೂ ಸಹ ಬೆಂಬಲಿಸಿ ಜೆಡಿಎಸ್ನ್ನು ಮತ್ತು ಭೀಮಪ್ಪ ಗಡಾದ ಅವರ ಕೈಬಲಪಡಿಸಿದಲ್ಲಿ ಮೂಡಲಗಿ ಪುರಸಭೆ ಅಭಿವೃದ್ದಿ ಹೊಂದುವದರಲ್ಲಿ ಯಾವೂದೇ ಸಂಶಯವಿಲ್ಲಾ ಎಂದರು.

   ಜಿ.ಕೆ.ಮೂರಗೋಡ, ಎಸ್.ಜಿ.ಗೋಡಿಗೌಡರ,  ಐ.ಎಸ್.ಕೊಣ್ಣೂರ, ಶಿವಾನಂದ ಪಾಶರ್ಿ, ವಿನೋದ ಪಾಟೀಲ, ವೀರಭದ್ರ ನೇರಲಿ,  ಬಿ.ವಾಯ್.ಶಿವಾಪೂರ, ಮಾಲಾ ಆಶ್ರೀತ್, ಸದಾಶಿವ ತಲಬಟ್ಟಿ, ಮಲ್ಲಪ್ಪ ಕಂಕಣವಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.  

  ಸಭೆಯಲ್ಲಿ ಸುಭಾಸ ಬೆಳಕೂಡ, ಸದಾಶಿವ ಶೀಲವಂತ, ಶಿವಬಸು ನೀಲನ್ನವರ, ಆದಮ್ ತಾಂಬೂಳಿ, ಬಸವರಾಜ ಪಾಟೀಲ, ಎಸ್.ಬಿ.ಹಂದಿಗುಂದ, ಮಲ್ಲಪ್ಪ ಮದಗುಣಿ, ಶ್ರೀಶೈಲ್ ಗಾಣಿಗೇರ, ಪ್ರಕಾಶ ಈರಪನ್ನವರ, ಚನ್ನಪ್ಪ ಅಥಣಿ, ಶಂಕರ ಕರಿಹೊಳಿ, ಶಿಲ್ಪಾ ಗೋಡಿಗೌಡರ, ಕೃಷ್ಣಪ್ಪ ಸೋನ್ನದ ಮತ್ತಿತರರು ಉಪಸ್ಥಿತರಿದ್ದರು.