ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ, ವಿದ್ಯಾಗಿರಿ, ಧಾರವಾಡ
J.S.S. Banashankari Arts, Commerce and Shantikumar Gubbi Science College, Vidyagiri, Dharwad
ಲೋಕದರ್ಶನ ವರದಿ
ಧಾರವಾಡ 12: ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ 02.04.2026ರಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ ಅವರ “75ನೇ ಹುಟ್ಟು ಹಬ್ಬದ ಅಮೃತ ಮಹೋತ್ಸವ”ದ ಅಂಗವಾಗಿ ಗದಗ ಜಿಲ್ಲೆಯ ಬಿಂಕದ ಕಟ್ಟಿ ಪ್ರಾಣಿ ಸಂಗ್ರಹಾಲಯದ ಮೂರು ವನ್ಯಜೀವಿಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ‌್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜು ಶಿಕ್ಷಣ ಇಲಾಖೆ, ಧಾರವಾಡ ಪ್ರಾದೇಶಿಕ ಕಛೇರಿಯ ಮಾನ್ಯ ಜಂಟಿ ನಿರ್ದೇಶಕರಾದ ಪ್ರೊ. ಕರೀಮುನ್ನಿಸಾ ಸೈಯ್ಯದ ಅವರು ತಮ್ಮ ಅತಿಥಿ ಪರ ನುಡಿಗಳಲ್ಲಿ ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಒಂದು ಮಹಾವಿದ್ಯಾಲಯದಿಂದ ವನ್ಯಜೀವಿ ದತ್ತು ಸ್ವೀಕಾರ ತೆಗೆದುಕೊಂಡ ಶ್ರೇಯಸ್ಸು ಜೆ.ಎಸ್.ಎಸ್. ಮಹಾವಿದ್ಯಾಲಯಕ್ಕೆ ಸಲ್ಲುತ್ತದೆ ಎಂದು ಪ್ರಶಂಸಿದರು.
ವನ್ಯಜೀವಿ ರಕ್ಷಣೆ ಹಾಗೂ ನಿಸರ್ಗದ ಸುಸ್ಥಿತಿ ನಿರ್ವಹಣೆ ದೇವರಿಗೆ ಸಲ್ಲಿಸುವ ಸೇವೆಗಿಂತ ಮಿಗಿಲಾದದ್ದು ಎಂದು ತಿಳಿಸಿದರು. ಹಾಗೆಯೇ, ಜೆ.ಎಸ್.ಎಸ್. ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಒಗ್ಗೂಡಿ ಇಂತಹ ಮಹತ್ಕಾರ್ಯ ಕೈಗೊಂಡದ್ದು ಶ್ಲಾಘನೀಯ ಮತ್ತು ಇದು ಜೆ.ಎಸ್.ಎಸ್. ಸಂಸ್ಥೆಯ ಸಂಸ್ಕಾರ ಹಾಗೂ ಮೌಲ್ಯಗಳ ಪ್ರತೀಕ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಆಗಮಿಸಿದ್ದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಅವರು ಮಾತನಾಡುತ್ತಾ, ಸಂಸ್ಥೆ ಬೆಳೆದು ಬಂದ ರೀತಿಯನ್ನು ವಿವರಿಸಿ, ಮಹಾವಿದ್ಯಾಲಯವು ಏರಿ್ಡಸಿದ್ದ ವನ್ಯಜೀವಿ ಸಂರಕ್ಷಣೆ ಹಾಗೂ ದತ್ತು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಇಂದಿನ ಕಾಲದಲ್ಲಿ ಪರಿಸರ ಸಂರಕ್ಷಣೆ ಮತ್ತು ಜೀವ ವೈವಿಧ್ಯತೆಯ ರಕ್ಷಣೆ ಬಹಳ ಮುಖ್ಯವಾಗಿದೆ. ಪ್ರಾಣಿ ಉದ್ಯಾನಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲ ಅವು ಅಪರೂಪದ ಮತ್ತು ಅಪಾಯದಲ್ಲಿರುವ ಪ್ರಾಣಿಗಳನ್ನು ಸಂರಕ್ಷಿಸುವ ಕೇಂದ್ರಗಳಾಗಿವೆ.
ಮಹಾವಿದ್ಯಾಲಯದಿಂದ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದ ‘ಉಷ್ಟ್ರಪಕ್ಷಿ’, ‘ಕೃಷ್ಣಮೃಗ’ ಮತ್ತು ‘ನಿಲಗಾಯ’ ಎಂಬ ಮೂರು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ರೂ.55,000/-ಗಳ ಚೆಕ್‌ನ್ನು ಡಾ. ಅಜಿತಪ್ರಸಾದ ಅವರು ಗದಗದ ವಲಯ ಅರಣ್ಯಾಧಿಕಾರಿಗಳಾದ ಶ್ರೀ ರಾಮಪ್ಪ ಪೂಜಾರ ಅವರಿಗೆ ಪ್ರಾಣಿ ದತ್ತು ಸ್ವೀಕಾರಕ್ಕಾಗಿ ಹಸ್ತಾಂತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ವೆಂಕಟೇಶ ಮುತಾಲಿಕ ಅವರು ಮಾತನಾಡಿ, ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವುದು ಒಂದು ಶ್ರೇಷ್ಠ ಕಾರ್ಯ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಸಲುಹಿದಂತಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಶ್ರೀಮತಿ ವಾಣಿಶ್ರೀ ಪ್ರಸಾದ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್. ಆಡಳಿತಾಧಿಕಾರಿಗಳಾದ ಶ್ರೀ ಅರಿಹಂತ ಪ್ರಸಾದ, ಜೆ.ಎಸ್.ಎಸ್. ಎಂ.ಸಿ.ಎ. ಕಾಲೇಜಿನ ನಿರ್ದೇಶಕರಾದ ಡಾ. ಸೂರಜ ಜೈನ್, ಜೆ.ಎಸ್.ಎಸ್. ಐ.ಟಿ.ಐ. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಹಾವೀರ ಉಪಾಧ್ಯೆ, ಗದಗದ ಬಿಂಕದಕಟ್ಟಿ ಮೃಗಾಲಯದ ಶಿಕ್ಷಣಾಧಿಕಾರಿಗಳಾದ ಶ್ರೀ ವಿನೋದ ಕುಲಕರ್ಣಿ, ಮಹಾವಿದ್ಯಾಲಯದ ಉಪಪ್ರಾಚಾರ್ಯರಾದ ಶ್ರೀಮತಿ ಅವಂತಿಕಾ ರೊಟ್ಟಿ, ಡಾ. (ಶ್ರೀಮತಿ) ನಳಿನಿ ಕುಲಕರ್ಣಿ ಮತ್ತು ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಶೌಕತಅಲಿ, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. (ಶ್ರೀಮತಿ) ರತ್ನಾ ಐರಸಂಗ ಅತಿಥಿಗಳನ್ನು ಪರಿಚಯಿಸಿದರು. ಡಾ. ಆರ್.ಎಂ. ಪತ್ತಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಶೌಕತಅಲಿ ವಂದಿಸಿದರು. ಕು. ಅಂಜಲಿ ಮತ್ತು ವೈಷ್ಣವಿ ನಿರೂಪಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 