ಜ 18ರಿಂದ 2 ದಿನಗಳ ಗಗನಚುಕ್ಕಿ ಜಲಪಾತ ಉತ್ಸವ

ಮಂಡ್ಯ, ಜ 11, ಜಿಲ್ಲೆಯ ಮಳವಳ್ಳಿ ಸಮೀಪವಿರುವ ಪ್ರಖ್ಯಾತ ಗಗನಚುಕ್ಕಿಯಲಲ್ಇ ಇದೇ 18ರಿಂದ 2 ದಿನಗಳ ಕಾಲ ಗಗನಚುಕ್ಕಿ ಜಲಪಾತೋತ್ಸವ ನಡೆಯಲಿದೆ ಎಂದು ಶನಿವಾರ ಜಿಲ್ಲಾಡಳಿತದ ಅಧಿಕೃತ ಹೇಳಿಕೆ ತಿಳಿಸಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಉತ್ಸವದ ಯಶಸ್ಸಿಗಾಗಿ ಮಂಡ್ಯ ಜಿಲ್ಲಾಡಳಿತ ಸರಣಿ ಕಾರ್ಯಕ್ರಮಗಳನ್ನು ಸಿದ್ಧಪಡಿಸುತ್ತಿದೆ ಎಂದು ಜಿಲ್ಲಾಧಿಕಾರಿ ಎಂ ವಿ ವೆಂಕಟೇಶ್ ಹೇಳಿದ್ದಾರೆ. ಜಲಪಾತದ ವೀಕ್ಷಿಸಲು ದೇಶದ ವಿವಿಧೆಡೆಯಿಂದ ಸುಮಾರು ಒಂದು ಲಕ್ಷ ಪ್ರವಾಸಿಗರು ಉತ್ಸವಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.ಈ ಉತ್ಸವಕ್ಕೆ ಆಗಮಿಸುವ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಬಹುತೇಕ ಪ್ರವಾಸಿಗರು ಹಳೆಯ ಮೈಸೂರು ಪ್ರದೇಶಗಳಿಗೂ ಪ್ರವಾಸ ಕೈಗೊಳ್ಳಲಿದ್ದಾರೆ.ಜಲಪಾತೋತ್ಸವ ನಡೆಯುವ ಸ್ಥಳದಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವ ಕ್ರಮಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿಯವರು  ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಲ ಕ್ರೀಡೆಗಳು, ಹೆಲಿಕಾಪ್ಟರ್ ಮತ್ತು ಕೊರಾಕಲ್ ಸವಾರಿಗಳು, ಗಾಳಿಪಟ ಉತ್ಸವ ಮತ್ತು ಬೈಕು ರ್ಯಾಲಿಗಳು ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜನೆಯಾಗಿವೆ.   ಇದೇ ಮೊದಲ ಬಾರಿಗೆ ಹೆಲೆಕಾಪ್ಟರ್ ಮೂಲಕ ಭವ್ಯ ಜಲಪಾತದ ವೈಮಾನಿಕ ನೋಟ ವೀಕ್ಷಣೆಗೂ ವ್ಯವಸ್ಥೆ ಮಾಡುವ ವಿಚಾರವನ್ನು ಪ್ರಸ್ತಾಪಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿಕೆಯಲ್ಲಿ ತಿಳಿಸಿದೆ.