ಏಪ್ರಿಲ್ 1 ರಿಂದ ಜ. ತೋಂಟದಾರ್ಯ ಜಾತ್ರಾ ಮಹೋತ್ಸವ ಆರಂಭ : ವಿನಾಯಕ ಮಾನ್ವಿ
J. Tontadarya Jatra festival to begin from April 1: Vinayak Manvi
ಗದಗ 25: ನಾಡಿನ ಖ್ಯಾತ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ಗದುಗಿನ ಶ್ರೀ ಜ. ತೋಂಟದಾರ್ಯ ಜಾತ್ರಾ ಮಹೋತ್ಸವವು ಇದೆ ಏಪ್ರಿಲ್ 1 ರಿಂದ 4ರ ವರೆಗೆ ಜರುಗಲಿದೆ ಎಂದು ಜಾತ್ರಾ ಮಹೋತ್ಸವದ ಅಧ್ಯಕ್ಷರಾದ ವಿನಾಯಕ ಮಾನ್ವಿ ಅವರು ಹೇಳಿದರು. ನಗರದ ಶ್ರೀಮಠದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಏಪ್ರಿಲ್ 1 ರಂದು ಸಂಜೆ 6.30 ಗಂಟೆಗೆ ಜಾತ್ರಾ ಮಹೋತ್ಸವ ಪ್ರಾರಂಭೋತ್ಸವ ಜರುಗುವುದು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಮುರುಘಾಮಠದ ಜ. ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸುವರು.
ಹಾವೇರಿ ಹುಕ್ಕೇರಿಮಠದ ಪೂಜ್ಯಶ್ರೀ ಸದಾಶಿವ ಮಹಾಸ್ವಾಮಿಗಳು, ಮುಂಡರಗಿ ತೋಂಟದಾರ್ಯ ಶಾಖಾ ಮಠದ ಪೂಜ್ಯಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಮಣಕವಾಡದ ದೇವಮಂದಿರ ಮಹಾಮಠದ ಪೂಜ್ಯಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು, ಹಂದಿಗುಂದ ಗಿರಿಮಠದ ಪೂಜ್ಯಶ್ರೀ ಶಿವಾನಂದ ಸ್ವಾಮಿಗಳು, ಕಲಬುರ್ಗಿ ತೋಂಟದಾರ್ಯ ಶಾಖಾ ಮಠದ ಪೂಜ್ಯಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶಿರಸಂಗಿ ಮಹಾಲಿಂಗೇಶ್ವರ ಮಠದ ಪೂಜ್ಯಶ್ರೀ ಬಸವಮಹಾಂತ ಸ್ವಾಮಿಗಳು ಸಾನಿಧ್ಯ ವಹಿಸುವರು ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಧಾನಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಅವರು ಗ್ರಂಥ ಲೋಕಾರೆ್ಣ ಮಾಡುವರು ಎಂದು ಹೇಳಿದರು.
ಏಪ್ರಿಲ್ 2 ರಂದು ಸಂಜೆ 4 ಗಂಟೆಗೆ ಎಸ್.ಎಸ್. ಕಳಸಾಪುರ ಶೆಟ್ಟರ ಅವರ ಮನೆಯಿಂದ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಪೂಜ್ಯಶ್ರೀಗಳು ಆಗಮಿಸುವರು. ಸಂಜೆ 6.30 ಗಂಟೆಗೆ ಮಹಾ ರಥೋತ್ಸವ ಜರುಗುವುದು. ರಾತ್ರಿ 7.30 ಗಂಟೆಗೆ ಜರುಗುವ ಕಾರ್ಯಕ್ರಮದಲ್ಲಿ ಜ.ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸುವರು. ಗದುಗಿನ ವಿರೇಶ್ವರ ಪುಣ್ಯಾಶ್ರಮದ ಪೂಜ್ಯಶ್ರೀ ಡಾ.ಕಲ್ಲಯ್ಯಜ್ಜನವರು, ಬೀದರಿನ ಡಾ. ಗುರುಬಸವ ಸ್ವಾಮಿಗಳು, ಮಹಾರಾಷ್ಟ್ರದ ಪೂಜ್ಯಶ್ರೀ ಶಿವಲಿಂಗೇಶ್ವರ ಸ್ವಾಮಿಗಳು, ಕಲಬುರ್ಗಿಯ ಪೂಜ್ಯಶ್ರೀ ಕೆಂಚಬಸವ ಶಿವಾಚಾರ್ಯ ಸ್ವಾಮಿಗಳು, ರಟಕಲ್ಲಿನ ಪೂಜ್ಯಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಎಸ್. ಪಾಟೀಲ, ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ. ಆರ್. ಪಾಟೀಲ, ಮಾಜಿ ಸಚಿವ ಎಸ್. ಎಸ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ ಸೇರಿದಂತೆ ಮುಂತಾದವರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ಐಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾ್ಯಂಕ್ ಪಡೆದ ಚಿಕ್ಕೋಡಿಯ ಕಿರಣ ಕಮತೆ ಹಾಗೂ ನ್ಯೂಯಾರ್ಕಿನಿಂದ 2025 ನೇ ಸಾಲಿನ ಇಕ್ವಿಡರ್ ಪ್ರಶಸ್ತಿ ಪಡೆದ ಧಾರವಾಡದ ತೀರ್ಥ ಗ್ರಾಮದ ಬೀಬಿ ಫಾತಿಮಾ ಮಹಿಳಾ ಸ್ವಸಹಾಯ ಸಂಘ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಏಪ್ರಿಲ್ 3 ರಂದು ಸಂಜೆ 4 ಗಂಟೆಗೆ ಬಸವೇಶ್ವರ ನಗರದ ಕುಬಸದ ಬಂಧುಗಳ ಮನೆಯಿಂದ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಪೂಜ್ಯಶ್ರೀಗಳ ಆಗಮನವಾಗುವುದು. ಸಂಜೆ 6.30 ಗಂಟೆಗೆ ಲಘು ರಥೋತ್ಸವ ಜರುಗುವುದು ನಂತರ ನಡೆಯುವ ಕಾರ್ಯಕ್ರಮದಲ್ಲಿ ಜ. ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸುವರು. ಬಾಗಲಕೋಟೆಯ ಪೂಜ್ಯಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಸಂಡೂರಿನ ಪೂಜ್ಯಶ್ರೀ ಪ್ರಭು ಮಹಾಸ್ವಾಮಿಗಳು, ಅರಸಿಕೆರೆಯ ಪೂಜ್ಯಶ್ರೀ ಶಾಂತಲಿಂಗ ದೇಶಿ ಕೇಂದ್ರ ಮಹಾಸ್ವಾಮಿಗಳು, ಬಾಚಿಗೊಂಡನಹಳ್ಳಿಯ ಪೂಜ್ಯಶ್ರೀ ಶಿವಮಹಾಂತ ಮಹಾಸ್ವಾಮಿಗಳು ಸಮ್ಮುಖ ವಹಿಸುವವರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಗೌರವ ಸನ್ಮಾನ ಜರುಗಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಕೆ. ಪಾಟೀಲ ಸಂಸದ ಬಸವರಾಜ ಬೊಮ್ಮಾಯಿ, ಹಾಲಿ ಶಾಸಕ ಸಿ.ಸಿ. ಪಾಟೀಲ ಉಪಸ್ಥಿತರಿರುವರು. ಧಾರವಾಡದ ಶ್ರೀಮತಿ ನಾಗರತ್ನ ಹಡಗಲಿ ಅವರಿಂದ ವಚನ ನೃತ್ಯ ರೂಪಕ ಜರುಗಲಿದೆ. ಏಪ್ರಿಲ್ 4 ರಂದು ಸಂಜೆ 6.30 ಗಂಟೆಗೆ ಮಂಗಲೋತ್ಸವ ಕಾರ್ಯಕ್ರಮ ಜರಗುವುದು. ಪೂಜ್ಯಶ್ರೀ ಜ.ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಮುಳ್ಳಹಳ್ಳಿಯ ಪೂಜ್ಯಶ್ರೀ ಶಿವಯೋಗಿ ಮಹಾಸ್ವಾಮಿಗಳು,
ಬೆಳಗಾವಿ ರುದ್ರಾಕ್ಷಿಮಠದ ಪೂಜ್ಯಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಅಳಂದದ ಪೂಜ್ಯಶ್ರೀ ಕೊರಣೇಶ್ವರ ಮಹಾಸ್ವಾಮಿಗಳು, ಶೇಗುಣಿಸಿಯ ಪೂಜ್ಯಶ್ರೀ ಡಾ. ಮಹಾಂತ ಪ್ರಭು ಮಹಾಸ್ವಾಮಿಗಳು, ಬಸವಬೆಳವಿಯ ಪೂಜ್ಯಶ್ರೀ ಶರಣಬಸವ ದೇವರು ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಅವರುಗಳು ಆಗಮಿಸುವರು. ಕುಮಾರಿ ಮಾನ್ಯ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಜಾತ್ರಾ ಮಹೋತ್ಸವದ ಅಧ್ಯಕ್ಷರಾದ ವಿನಾಯಕ ಮಾನ್ವಿ ಅವರು ಹೇಳಿದರು.
ಜಾತ್ರಾ ಮಹೋತ್ಸವದ ಕಾರ್ಯದರ್ಶಿಗಳಾದ ಚೇತನ ಅಂಗಡಿ ಅವರು ಮಾತನಾಡಿ, ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ 26 ರಂದು ಬೆಳಿಗ್ಗೆ 10 ಗಂಟೆಗೆ ಜ. ತೋಂಟದಾರ್ಯ ಮಠದ ಪಕ್ಕದ ಬಯಲು ಆವರಣದಲ್ಲಿ ಪುರುಷರ ಕಬಡ್ಡಿ ಪಂದ್ಯಾವಳಿ ಜರುಗಲಿದೆ. ಮಾರ್ಚ್ 26 ರಂದು ಬೆಳಿಗ್ಗೆ 7 ಗಂಟೆಗೆ ನಗರದ ಒಕ್ಕಲಗೇರಿ ರಾಚೋಟೇಶ್ವರ ದೇವಸ್ಥಾನದಿಂದ ಹಾಗೂ ಮಾರ್ಚ್ 27 ರಂದು ಬೆಳಿಗ್ಗೆ 7 ಗಂಟೆಗೆ ಎಸ್.ಎಂ. ಕೃಷ್ಣ ನಗರದಲ್ಲಿ ವ್ಯಸನಮುಕ್ತ ಸಮಾಜ ಜಾಗೃತಿಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 29 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯ ವರೆಗೆ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಮಾರ್ಚ್ 30ರಂದು ಸೋಮವಾರ ಬೆಳಗ್ಗೆ 10.30 ಗಂಟೆಗೆ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ವಚನ ಕಂಠಪಾಠ ಸ್ಪರ್ಧೆ, ವಚನ ನೃತ್ಯ ಮತ್ತು ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸಂಜೆ 4 ಗಂಟೆಗೆ ಮಹಿಳೆಯರಿಂದ ವಚನ ಸಾಹಿತ್ಯದ ಪುಸ್ತಕ ಪರಿಚಯ ಕಾರ್ಯಕ್ರಮ ಜರಗುವುದು. ಮಾರ್ಚ್ 31 ರಂದು ಬೆಳಿಗ್ಗೆ 10.30 ಗಂಟೆಗೆ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ವಚನ ಗಾಯನ ಸ್ಪರ್ಧೆ ಹಾಗೂ ವಚನಕಾರ್ತಿಯವರ ವೇಷಭೂಷಣ ಸ್ಪರ್ಧೆ ಜರುಗಲಿದೆ.
ಸಂಜೆ 4 ಗಂಟೆಗೆ ಮಹಿಳೆಯರಿಂದ ಸಿರಿಧಾನ್ಯಗಳ ಅಡುಗೆ ಸ್ಪರ್ಧೆ ಹಾಗೂ ಮರೆತು ಹೋದ ಖಾದ್ಯಗಳ ಅಡುಗೆ ಸ್ಪರ್ಧೆ ಜರುಗಲಿದೆ. ಏಪ್ರಿಲ್ ಒಂದರಂದು ಮಧ್ಯಾಹ್ನ 12 ಗಂಟೆಗೆ ಬಸವೇಶ್ವರ ನಗರದ ಭಕ್ತರಿಂದ ಶ್ರೀ ಮಠಕ್ಕೆ ಬಸವಬುತ್ತಿ ಆಗಮಿಸಲಿದೆ ಎಂದು ಅವರು ಹೇಳಿದರು. ಈ ಸುದ್ದಿಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವದ ಉಪಾಧ್ಯಕ್ಷರಾದ ಶಿವಯ್ಯ ನಾಲ್ವತ್‌ವಾಡಮಠ, ಸುಧಾ ಹುಚ್ಚಣ್ಣವರ, ಸುಭಾಷ ಚಂದ್ರ್ಪನವರ, ಸಹ ಕಾರ್ಯದರ್ಶಿ ಎಂ.ಜಿ. ಹೂಗಾರ, ಚಂದ್ರಶೇಖರ ರಾಜೂರ, ಎಸ್. ವಿ. ಪವಾಡಿಗೌಡ್ರ, ಸಂಘಟನಾ ಕಾರ್ಯದರ್ಶಿ ಉಮೇಶಗೌಡ್ರ ಪಾಟೀಲ,ಯಲ್ಲೋಸಾ ಹಬೀಬ, ಕೋಶಾಧ್ಯಕ್ಷರಾದ ವಿರುಪಾಕ್ಷಪ್ಪ ದಲಾಲಿ, ಸಹಕೋಶಾಧ್ಯಕ್ಷರಾದ ವೀರಣ್ಣ ಗಡಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 