ಇಟ್ಟಿಗಿ ಊರಮ್ಮ ದೇವಿ ಜಾತ್ರೆಗೆ ಜನಪದ ಮೇಳ ಮೆರಗು
ಹೂವಿನಹಡಗಲಿ 25 : ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ಊರಮ್ಮ ದೇವಿ ಜಾತ್ರೋತ್ಸವಬುಧವಾರ ಅದ್ದೂರಿಯಾಗಿ ಜರುಗಿತು. ಮಂಗಳವಾರ ವಿವಿಧ ಜನಪದ ವಾದ್ಯಗಳೊಂದಿಗೆ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು. ದೇವಿಯ ಮೂರ್ತಿಯನ್ನು ಚೌತಿಮನಕಟ್ಟೆಯಲ್ಲಿ ಪ್ರತಿಷ್ಠಾಪಿಸಿ ನಂತರ ಕುಂಭೋತ್ಸವ ಹಾಗೂ ಉಪವಾಸ ಇರುವವರು ಪ್ರಮಾಚಕರು ಪೂರ್ಣಗೊಳಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹುಲುಸು (ಚರಗ) ಚೆಲ್ಲಿದರು. ಭಕ್ತರು ದೀರ್ಘದಂಡ ನಮಸ್ಕಾರದೊಂದಿಗೆ ಹರಕೆ ಸಲ್ಲಿಸಿದರು. ಗ್ರಾಮಸ್ಥರು ದೇವಿಗೆ ಉಡಿ ತುಂಬಿದರು. ಕೆಲವರು ಬೆಳ್ಳಿ ಆಭರಣಗಳನ್ನು ನೀಡಿ ಭಕ್ತಿ ಸಮರ್ಿಸಿದರು.